ಜಾತಿ

ನಿನ್ನ ಜನನವಾದೊಡೆ
ಜಾತಿ ಫಲಕ ನಿನ್ನೊಡೆ
ಭಂದನವಾದೆ ಅಂದಿನಿಂದೆ
ಜಾತಿನಿನ್ನೊಡಂ ವಿಲೀನವಾಗೆ.

ಅಜ್ಞಾನವ ತೊಡೆವಂ ಬ್ರಾಹ್ಮಣವರ್ಣಂ,
ಅನ್ಯಾಯವ ತೊಡೆವಂ ಕ್ಷತ್ರಿಯಂ,
ಅಭಾವವ ತೊಡೆವಂ ವೈಶ್ಯಂ,
ಆಲಸ್ಯವ ತೊಡೆವಂ ಶೂದ್ರಂ,
ಜಾತಿ ಎಲ್ಲಿಹುದೋ ಇಲ್ಲಿ,
ಇವೆಲ್ಲವುಗಳು
ಅವರವರ ಗುಣವನಾದರಿಸೆ,
ಅವರವರ ಕೆಲಸವನಾದರಿಸೆ,
ಅವರವರ ಸ್ವಭಾವವನಾಧರಿಸೆ
ಅವರವರ ಖರ್ಮವನಾದರಿಸಿ ವಿಂಗಡಿಸಿರೆ, ಹೊರತು ಹುಟ್ಟಿನಿಂದುದಯಿಸಿದಲ್ಲ..!!

ಹೆತ್ತವರಿಗರಿವಿಲ್ಲ ಜಾತಿಯೊಂದು ಪಿಡುಗು,
ಅವರ ಹೆತ್ತವರು, ಇನ್ನಾರನೋ ಅನುಸರಿಸಿ,
ಸ್ಪಷ್ಟಹುರುಳಿಲ್ಲ, ಈ ಜಾತಿ ವ್ಯವಸ್ಥೆಗೆ,
ಇರುವರೀರ್ವ ಸ್ತ್ರೀ ಪುಲ್ಲಿಂಗ,
ಜಾತಿ ಫಲಕ ತೊಟ್ಟು ಭಾವಭಂಗ..!

-ಕನ್ನಡದ ಭಕ್ತ

- ಕನ್ನಡದ ಭಕ್ತ

02 Apr 2017, 04:54 pm
Download App from Playstore: