ಒಳಗಣ್ಣು
ನಮಗೆ ಕಾಣುವುದಷ್ಟೆ ನೋಟವೆಂದರೆ ಹೇಗೆ ?ಕಂಡ ನೋಟಗಳೆಲ್ಲ ರೇಷ್ಮೆ ವಸ್ತ್ರದ ಮೇಲೆಮುತ್ತ ಚೆಲ್ಲಿದ ಹಾಗೆ ! ಕಣ್ಣಿರುವ ತನಕನೋಡಿದ್ದಾಯ್ತು ಅದನಿದನು : ಬೇಕಾದ್ದು, ಬೇಡದ್ದು.ನೋಟ ಒಳಮುಖವಾಯ್ತು, ಅಲ್ಲಿ ಕಂಡದ್ದೇನು?ಚೆಂಜೇನು ಕಾಣಿಸಿತು ಗೂಡಿನ ಚಿಟ್ಟಿಜೇನು,ಅಂಚೆ ಪೆಟ್ಟಿಗೆಯಲ್ಲಿ ಅದರದ್ದೆ ಝಂಕಾರ.ಅರಿಯದೆಯೆ ಕೈಯಿಟ್ಟರಾಗ ಅವು ಕಚ್ಚುವುವು :ಕಚ್ಚಿದ ಬೆರಳಿಗುಂಟು ಅಂಥಿಂಥ ಔಷಧ. ಕಣ್ಣೇ ಹೋಯಿತೆಂದು ನನಗೆ ಬಂದಿದೆ ಚಿಂತೆ.ಒಳಗಣ್ಣು ಕವಿತೆಯನು ನೇಯುವುವು ಒಳಗೊಳಗೆ :ಪ್ರಾಸಗಳು ಬಂದು ನಿಲ್ಲುವುವು ಮಲ್ಲಿಗೆಯಂತೆ.ಬಿರುಗಾಳಿಯಲ್ಲಿ ಉಯ್ಯಾಲೆಯಾಡುವ ಹುಡುಗಿನನ್ನನ್ನು ಕಂಡು ನಕ್ಕಂತೆ ತೋರಿತು ನನಗೆ !ಒಂದೊಂದು ಪಂಕ್ತಿಗೂ ಛಂದಸ್ಸು ಉಂಟು,ಕಣ್ಣು ಹೋಗಿದ್ದರೂ ಕವಿತೆ ನಿಲ್ಲಲೆ ಇಲ್ಲ ;ಒಳಗಣ್ಣ ಮುಂದೆ ನಾನು ನನ್ನ ಕವಿತೆಯ ಕಂಡೆ,ಕವಿತೆ ಸಾವಿರ ಕಣ್ಣ ತೆರೆದು ಕಂಡಿತು ನನ್ನ.
- nagaraj
02 Apr 2017, 05:39 pm
Download App from Playstore: