ಹಲ್ಕಟ್ ಕವಿತೆ
ಅದೋ,ದೂರದಿಂದ ಕೇಳಿ
ಬರುತ್ತೆ ಮಸಣದ ಕವಿತೆ
ಆಹ್ಲಾದಕರ ಶುಶ್ರಾವ್ಯ
ಇನ್ನು ಏನೇನೋ
**
ಬದುಕಿಗೆ ಆಸೆಯ ವೈನ್
ಕುಡಿಸಿದ್ದಾದರೂ ಏಕೆ!?
ಥೂ,ಅಮಲಿನ್ನು ಇಳಿದಿಲ್ಲ
ಹೊಟ್ಟೆ ತುಂಬಿದ ಮೇಲಿನ
ಹಸಿವು ಕವಿತೆ
**
ಈ ಜೇಬಿನಲಿ
ಅನಾಥ ಮೌನಗಳನ್ನು
ಮಾತ್ರ ಶೇಖರಿಸಲಿರುವುದಲ್ಲ
ಥತ್ ನಿಮ್ ಮುಖಕ್ಕೆ
ಸಾಯೋ ನೆನಪಿಗೆ
ಅವಳೊಂದು ಕವಿತೆ
**
ಎರ್ರಾಬಿರ್ರಿ ಏರಿದೆ
ಅಮಾಯಕ ಬಯಕೆಯ
ಅರ್ಧ ಕವಿತೆಗಳು
ಪದಗಳನ್ನು ಜೋಡಿಸಿ
ಬೇಕಾದವರು ಕವಿತೆಯಾಗಿಸಿ
ದಯವಿಟ್ಟು
**
ಅವನ್ಯಾರದೋ
ಕವಿತೆಯಲಿ ಹೋದ
ನೋಡಿ ಅದೇ ದಾರಿ
ಮಸಣ ಜೋಪಡಿಯೊಳಗೆ
ಇಷ್ಟು ಮಾತ್ರ ಹೇಳಬಲ್ಲ
ನನ್ನೀ ಅಂತಿಮ
ಕವಿತೆ..!!
#ಅವಿಜ್ಞಾನಿ
- ಅವಿಜ್ಞಾನಿ
04 Apr 2017, 11:01 am
Download App from Playstore: