ನನ್ನ ದಾರಿ ನಿನ್ನ ದಾರಿ

ನಾನು ನಿನ್ನ‌ ಕ‌ವಿತೆಗ‌ಳ‌ ಸಾಲುಗ‌ಳಾಗುವೆ ಎಂದ‌ಳು, ಸ‌ರಿ ಎಂದೆ.
ನಿನ್ನ‌ ಮೆಚ್ಚಿನ‌ ಹಾಡುಗ‌ಳ‌ ಜೀವ‌ವಾಗುವೆ
ಎನ್ನ‌ಲು, ಆಗ‌ಲಿ ಎಂದೆ.
ನಿನ್ನ‌ ಕ‌ನ‌ಸುಗ‌ಳ‌ ಒಡ‌ತಿಯಾಗಿ ನಿನ್ನ‌ ಕ‌ಲ್ಪ‌ನೆ ಯಾಗುವೆ ಎಂದ‌ಳು.ಹಾಗೆ ಸ್ವ‌ಲ್ಪ‌ ಮ‌ನ‌ಸ್ಸಿಗೆ ಮುದ‌ ನೀಡುವ‌ ಪ್ರೀತಿಯಾಗು ಅಂದೆ.
ಈಗ‌ ನ‌ನ್ನ‌ ದಾರಿ ನ‌ನ‌ಗೆ, ನಿನ್ನ‌ ದಾರಿ ನಿನ‌ಗೆ ಎಂದು ಹೊರ‌ ನೆಡೆದ‌ಳು.
ಸ‌ರಿ ಮೊದ‌ಲ‌ನಿಂದ‌ಲೂ ನ‌ನ್ನ‌ ದಾರಿಯಲ್ಲಿ ನಾನು ಸಾಗುತ್ತಿದ್ದೇನೆಂದು ಬೀಳ್ಕೊಟ್ಟೆ.
ಹೀಗೆ ಅನ‌ಗ‌ತ್ಯ‌,ಕಾರ‌ಣ‌ವಿಲ್ಲದ‌ ಪ್ರೀತಿ ತೋರುತ್ತ‌
ಹ‌ತ್ತಿರ‌ವಾಗಿ ಮ‌ತ್ತೆ ದೂರ‌ವಾ‌ಗುತ್ತ‌ ನೆಮ್ಮ‌ದಿ ಕ‌ಳೆದು, ಕ‌ಳೆದುಕೋಳ್ಳುವ‌ರ‌ನ್ನ ನೆನೆದು ಮ‌ರುಗುತ್ತ‌ ಮುಂದೆ ಹೆಜ್ಜೆ ಹಾಕಿದೆ.

- ಶಶಿಧರ ಹೆಚ್ ಎನ್

05 Apr 2017, 11:01 pm
Download App from Playstore: