ಮನಸು

ಅತ್ತಿಂದ ಇತ್ತ ಅಡವಿಯ ಸುತ್ತ
ಓಡುತಲಿ ಇರುವ ಪುಟ್ಟ
ಚಂಚಲದ ಮಾಯಾ ಜಿಂಕೆಯಂತೆ
ಆಯಿತು ಈ ನನ್ನ ಮನಸು!!

ತಪ್ಪು ಸರಿ ಏನೆಂದು ಅರಿಯದೇ
ತೊದಲುವ ಪುಟ್ಟ ಕಂದನ
ಮಾತಿನಂತೆ ತಡವರಿಸಿ
ನುಡಿಯುತಲಿ ಈ ನನ್ನ ಮನಸು!!

ಸ್ವಚ್ಛ ವಸ್ತ್ರದ ಮೇಲೆ
ಬಣ್ಣದ ಗೆರೆ ಎಳೆದು
ಅಂದ ಹೆಚ್ಚಿಸುವ ಕೆಲಸ
ಮಾಡ ಬಯಸಿತು ಈ ನನ್ನ ಮನಸು!!

ತನ್ನ ಅರಿವನೂ ಮೀರಿ
ನವ ಪುಳಕದಲಿ ಮೈ ಮರೆತು
ಸವಿ ಪ್ರೀತಿಯಲಿ ಮಿಂದೆದ್ದ ಸಂತಸವ ಮೆರೆದಿಹುದು ಈ ನನ್ನ ಮನಸು!!

- ಪಿ.ಜಿ.ಜ್ಯೋತಿ

09 Apr 2017, 04:19 pm
Download App from Playstore: