'ಬರ' ದ ದೇವ

ಕರುಣೆಯ ಕಣ್ಣು
ತೆರೆಯುವುದಿಲ್ಲವೆ ನೀನು
ಧರೆ ಹೊತ್ತಿ ಉರಿಯುವಾಗ
ಎಲ್ಲಿರುವೆ ನೀನು

ಬತ್ತಿ ಹೋಗಿವೆ ಒಣಗಿ
ಕೆರೆ ಕಟ್ಟೆ ಬಾವಿಗಳು
ಅಲೆದಾಡಬೇಕಿನ್ನೆಲ್ಲಿ
ಪ್ರಾಣಿ ಪಕ್ಷಿ ಮೃಗಗಳು

ಅಡಗಿ ಹೋಗಿವೆ ಕೇಳದೆ
ಕುಕಿಲ ಕಾಜಾಣ ಸ್ವರಗಳು
ಪರಿತಪಿಸುತಿವೆ ಸಿಗದೆ
ಆಹಾರದ ಒಂದಗುಳು

ಸಾಕಲಾಗದೆ ಕಟುಕರಿಗೆ
ಪಶುಗಳ ಮಾರಾಟ
ಸಾಕಬೇಕೆಂದರೂ ನೋಡಲಾಗುತ್ತಿಲ್ಲ
ಅನ್ನದಾತನ ಗೋಳಾಟ

ಬೆಂಕಿ ಬಿದ್ದಿದೆ ಹಸಿರ ಸಿರಿ
ನೆರಳ ಖಣಿ ಕಾಡಿಗೆ
ಒದ್ದಾಡುತಿವೆ ವಿಲವಿಲ
ಜೀವಜಂತುಗಳು ಬೇಗುದಿಗೆ

ಅವತರಿಸಿರುವೆ ನೀನು
ಇಳಿದು ಬಾ ಎಂದಾಗ
ಹರಿದಿರುವೆ ನೀನು
ಹೊಳೆದು ಬಾ ಎಂದಾಗ


ಇನ್ನಾದರೂ ಬರಬಾರದೆ
ತಣಿಸಲು ಈ ಜೀವ ಧರೆಯ
ತಪ್ಪಿಸು ನೀ ಬಂದು
ಬೆಂಕಿಯ ಈ ಮಳೆಯ

✍ಚಂದ್ರಶೇಖರ ಹೆಗಡೆ
ಗುಳೇದಗುಡ್ಡ

- ಚಂದ್ರಶೇಖರ ಹೆಗಡೆ

10 Apr 2017, 05:10 pm
Download App from Playstore: