ನಿನ್ನ ಹಠಮಾರಿತನ....
ಏಕೋ ಈ ನಿನ್ನ ಕೋಪ ಏಕೋ ಈ ನಿನ್ನ ತಾಪ
ಸುಡುತಿದೆ ಪ್ರತಿಕ್ಷಣ ನನ್ನ ಪ್ರೀತಿಯ ನೆನಪನ್ನ
ಬದುಕಿನ ಸಾರ ಬರಿದಾಗುತಿದೆ ಇಂದು..
ನೂರೊಂದು ಕನಸು ಕಾಣಿದೆ ನಿನ್ನ ನೋಡಿದಾಗ
ಕನಸಲ್ಲೆ ಬದುಕಿದೆ ಪ್ರತಿದಿನ ಕನವರಿಸುತ
ನನಸಾಗದ ಕನಸಾಯಿತು ಎಟುಕಲಾರದ ಹಣ್ಣು
ನಿನ್ನ ಆ ಮುಗುಳುನಗೆಗೆ ಮನಸೋತೆನಂದು
ಮಾಯವಾಗುತಿದೆ ಆ ನಿನ್ನ ನಗೆಯು
ಕರುಳ ಹಿಂಡಿ ಕಲುಷಿತ ವಾಗುತಿದೆ ಈ ಬದುಕು
ನಿನ್ನ ನೆನಪಿಲ್ಲದೆ
ನೂರು ಸಾರಿ ಕ್ಷಮೆ ಕೋರಲು ನಾನು
ತಾಳ್ಮೆಯ ನೀ ಮರೆಮಾಚಿ ತಡೆಹಾಕಿದೆ ನನ್ನ
ನೀನಿಲ್ಲದೆ ಈ ಮನೆಯಾಯಿತು ಸೆರಮನೆ ನನ್ನ ಪಾಲಿಗೆ
ನಂದಿಹೋಗುತಿದೆ ನನ್ನ ಪ್ರೀತಿಯ ನಂದಾದೀವಿಗೆ
ದಯಮಾಡಿ ಹೋಗದಿರು ನಾ ಕಾಣದ ಕಲ್ಪನೆಗೆ
ತೊರೆದಾಕು ಸುಡುವ ನಿನ್ನ ಮಹಾಕೋಪಾಗ್ನಿಯ
ನೀನಿಲ್ಲದೆ ಕಾಣೆನು ಬೆಳಕಿನ ಆಶಾಕಿರಣವ
"ಸೋತು ಗೆಲ್ಲುವ ಪ್ರೀತಿಯ ಗುಣಕೆ
ಆಗಬೇಡ ನೀನು ಗೆದ್ದು ಸೋಲುವ ಅಹಂಕಾರದ ಚಿಹ್ನೆಯು"
ಕಾಯುವೆ ಕೊನೆಕ್ಷಣದೊರೆಗು ನಿನ್ನ ಆಗಮನಕ್ಕೆ
ನನ್ನ ಪ್ರೀತಿ ಅರಮನೆಗೆ ನೀನೆ ಮಹಾರಾಣಿಯು
ಬೇರಾರಿಗೂ ಜಾಗವಿಲ್ಲ ನನ್ನ ಹೃದಯ ಸಿಂಹಾಸನಕ್ಕೆ....
- Irayya Mathad
10 Apr 2017, 09:10 pm
Download App from Playstore: