∆" ಪ್ರೇಮ-ವಿರಹ-ಗೀತೆ "∆
^^^^^^^^^^^^^^^^^^
" ಓ ಸಖಿಯೇ ಬಾ ಜೀವ ಉಳಿಸು
ನಾ ಬದುಕಲಾರೆನು ನಿನ್ನ ಮರೆತು
ಕಾಣದಾಯಿತೇ ನಿನ್ನ ಪ್ರೇಮದ ಗುರುತು
ಪ್ರೀತಿಯ ಸ್ವೀಕರಿಸು ನನ್ನರಿತು !!ಪ!!
ನನ್ನ ನೋವುಗಳೆಲ್ಲವ ಮರೆಸು
ನಿನ್ನ ಪ್ರೀತಿಯ ದೀಪ ಬೆಳಗಿಸಿ
ನನ್ನ ನಲಿವುಗಳೆಲ್ಲವ ತಣಿಸು
ನಿನ್ನ ಪ್ರೇಮದ ರೂಪ ಅರಳಿಸಿ !!೧!!
ನೀನಿಲ್ಲದೇ ನನಗಾರು ಗತಿಯೇ?
ಬಂದು ಸೇರು ನನ್ನ ಮನದ ರತಿಯೇ!
ನೀನೇ ನನ್ನ ಜೀವದ ಬೆಳಕು
ಕಾರಣ ಸಾಗಿದೆ ನನ್ನ ಈ ಬದುಕು !!೨!!
ಹೆಜ್ಜೆಯೊಂದಿಗೆ ಪ್ರೇಮದ ಗೆಜ್ಜೆಯ ನಾದ
ಅದನು ಬದಲಿಸದಿರು ಓ ಗೆಳತಿ
ಮರಳಿ ಬರುವೆಯಾ ನನ್ನರಸಿ
ಕಾದಿಹುದು ನನ್ನ ಸಹೃದಯ !!೩!!
- ₹HRD₹
[ಬರಹ]
ಗಣಿನಾಡಿನ ಗಿಣಿ
ರಾಮಪ್ಪ ದುಮ್ಮಾಡಿ
- RAMAPPA DUMMADI
11 Apr 2017, 04:12 pm
Download App from Playstore: