ಕೂಡಿ ಕಳೆವ ಬದುಕು

ಕೂಡಿ ಕಳೆವ ಆಟವಂತೆ‌ ಬದುಕು
ಎಲ್ಲಾ ಕೂಡಿದಾಗ ಕಂಡ ನಗುವೇ ಸೊಗಸು
ಕಳೆವ ‌ಆಟ ನೋಡಿದಾಗ ಮರಗುವುದು‌ ಮನಸು

ಕೂಡಿ‌ ಕಂಡ ನೋವು‌‌ ಖುಷಿಗಳಿಗೆ‌ ಕೊಡಲಾಗುವುದೆ ಬಿರುದು
ದೂರ‌‌ ಸರಿದು‌ ಒಂಟಿಯಲಿ ಕಂಡ ಖುಷಿಯು ಏನೋ ಮನದಾಳದಲ್ಲಿ ಬರಿದು

ಕೂಡಿದಾಗ ಮೌನದ ಕಟ್ಟೆಯ ಕೊನೆಯು
ಕಳೆದ ಕ್ಷಣವೆ ಮನದಲ್ಲಿ ಮುಗಿಯದ ಮಾತಿನ ಬರವು

ಎಲ್ಲ ಕೂಡುವ ಕ್ಷಣಕ್ಕೆ‌ ಕಾಯುವುದೆ ಕನಸು
ಕೂಡಿದ ಕ್ಷಣವೇ ನಲಿವುದು ಮನಸು
ಆ ಕ್ಷಣವ ನೆನೆವುದೇ‌ ಬಾಳ ಸೊಗಸು

- ಶ್ರೀಕಾವ್ಯ

12 Apr 2017, 06:02 pm
Download App from Playstore: