ಚಂದಿರ

ಆಕಾಶದ ಹಣೆಯಲ್ಲಿ ಸಿಂಧೂರ ಚಂದಿರ
ನಕ್ಷತ್ರದ ಸಾಮ್ರಾಜ್ಯಕ್ಕೆ ರಾಜನಿವ ಸುಂದರ
ಕಪ್ಪಾದ ರಾತ್ರಿಯಲ್ಲಿ ನಗುವ ನಕ್ಷತ್ರಗಳನಿಟ್ಟು
ಜಗಕೆಲ್ಲಾ ನೀಡುವ ತಂಪಾದ ತಂಗಾಳಿ.....

ಬೆಳಕೆಲ್ಲಾ ನಮಗಿಟ್ಟು ಕಳೆಗಳನ್ನು ಅಡಗಿಟ್ಟು
ಆಕಾಶದ ಅಂಚಲವ ಕಾಣದಂತೆ ಮಾಡಿರುವ
ಬೆರಳೆಣಿಕೆಗೆ ಸಿಗದಷ್ಟೂ ಆಕಾರಗಳ ರಚಿಸಿರುವ
ಸೂರ್ಯನನ್ನು ವಿಶ್ರಾಂತಿ ಭವನಕ್ಕೆ ಕಳಸಿ.....

ಕಗ್ಗತ್ತಲೇ ಕಳೆಯುವ ಕೆಲಸವನ್ನು ಕೈಗೊಂಡಿರುವ
ಅವನ ಅಂದದಿ ನಮ್ಮೆಲ್ಲರ ಗಮನವನ್ನು ಸೆಳೆದು
ಮೋಡಗಳ ಮಧ್ಯದಿಂದ ಇಣುಕಿಣುಕಿ ನೋಡುತಿರುವನು ...........

ನನ್ನ ನೋಡಲೆಂದು ಆ ನೀಲಿ ಭಾನಿನಲ್ಲಿ.......

- ಚುಕ್ಕಿ

12 Apr 2017, 08:39 pm
Download App from Playstore: