ಬಾಳ ಸಂಗಾತಿ

ಅರಿವಿರದೆ ಒರಿಸಿದ ನಿನ್ನ ಅಂಗೈಯ
ಹಿಡಿದು ಹೇಳುವೆ ...
ಹರಿಯೋ ನದಿಯ ಮಧ್ಯೆ ನಿನ್ನೆಂದು
ಬಿಡೆನು ....
ಮುಳುಗುವ ಸಂದರ್ಭ ಬಂದರೆ ನಾ
ನಿನ್ನ ಹೆಗಲ ಮೇಲೆ ಕುರಿಸಿ ನಡೆಯುವೆ ...

ನಾ ಉಸಿರು ಕಟ್ಟಿ ಅಲ್ಲಿಯೇ ಕೆಸರಾದರೂ
ಸರಿಯೆ....
ನಿನ್ನ ಬಿಗಿಯಾಗಿಡಿದ ಈ ಮೃದು ಕೈಯಾ
ಬಿಡೆನು ಸಖಿಯೆ ....
ನೀ ನಿನ್ನ ತವರೂರ ಗಣಿಯೆ ನಾ ನಿನ್ನ
ಗಣಿಯ ಕಾಯೋ ಕಾವಲುಗಾರನೇ ....

ನಿನ್ನ ಕಾಯುವುದಷ್ಟೆ ನನ್ನ ಕಾರ್ಯ
ನಿನ್ನ ಸವೆಸುವುದು ದರ್ಮವಲ್ಲವೇ...
ನೀ ಕಣ್ಣಾ ಹನಿ ಸೋಕಿಸಿದರೂ
ನನ್ನ ಅಂಗೈಯಲ್ಲಿ ಬಿಗಿಯಿಡಿವೆ ನಲ್ಲೆ .....

ನನ್ನ ಹೃದಯವೆ ನಿನ್ನ ತಲೆದಿಂಬು
ಗೆಳತಿ ...
ನನ್ನ ಮಡಿಲೆ ನಿನಗೆ ಹಾಸಿಗೆಯೆ
ಗೆಳತಿ .....
ನಾ ಮಡಿದರೂ ಬಿಡೆನೆ ನಿನ್ನ
ಅರಿವಿರದೆ ಒರಿಸಿದ ಅಂಗೈಯ ಗೆಳತಿ ....

ಲವ್ ಯು ಅಪ್ಪು ...

- Chinnu

13 Apr 2017, 08:34 pm
Download App from Playstore: