ಜೀವನ ಚಕ್ರ....
ನಾನು ನನ್ನಮ್ಮನಿಗೆ ಮಗಳಾಗಿ..
ನನ್ನ ಮಗಳಿಗೆ ನಾ ತಾಯಾಗಿ..
ಮಗಳ ಆಟ ನೋಟವ ಸಂಭ್ರಮಿಸಿ..
ಮುದ್ದಿಸುತಾ ತಿದ್ದಿ ಬೆಳಸಿ..
ಅವಳು ನನಗಿಂತ ಸುಖವಾಗಿ
ಕಾಣಲಿ ಎಲ್ಲಾ ಆನಂದವ ಬಾಳಲಿ..
ಎಂದು ಆಶಿಸುತಾ..
ನಿಂತ ನೀರಾಗದಂತೆ..
ಝುಳು ಝುಳು ಎನುತಾ
ಹರಿಯುವ ನದಿಯಂತೆ..
ಮಗಳನ್ನು ಬೇರೆ ಮನೆಯ ಬೆಳಕಾಗಿಸಿ..
ಅವಳು ಜವ್ದಾರಿಯನು ಹೊತ್ತು..
ಮಂದಾಸ ಬೀರುತಾ..
ತಾಯಾಗಿ ಸಂಭ್ರಮಿಸುತಾ..
ಜೀವನದಲ್ಲಿ ಏರಿಳಿಯುತಾ..
ಸವೆಸುವ ಪಥವೇ..
ಈ ಜೀವನ ಚಕ್ರವೆಂಬ
ನಿಲ್ಲಬಾರದ ಅಧ್ಬುತ ಪಯಣ....
ಜೀವನವೇ ಒಂದು
ಅಧ್ಬುತ relay..
ಇದ ನೀ ತಿಳಿದು..
ಬದುಕಿನ ಕಲೆ ಕಲಿತು..
ಜೀವನದ ನಿಯಮ ಅರಿತು..
ಸುಖವಾಗಿ ಬಾಳು..
ನನ್ನ ಮಗಳೆ....
- KR Sreekamala
15 Apr 2017, 08:38 am
Download App from Playstore: