ಗೋಪಾಲ
ಕಂಡೆನಾ ನೀಲಮೇಘ ಶಾಮನ
ದೇವಕಿಯ ಒಡಲ ತುಂಬಿದ
ಮಥುರೆಯ ಪುಣ್ಯಪುರುಷನ
ಯಶೋದೆಯ ಮಡಿಲ ಸೇರಿ
ಗೋಕುಲಕೆ ಪ್ರೀತಿ ತುಂಬಿದವನ
ಆಡುತಲೇ ಮಹಿಮೆಗಳ ತೋರಿ
ನಿಜ ಶಕುತಿ ಭಕುತಿಯ ಮೆರೆದವನ
ಕಿರುಬೆರಳಲೆ ಗೋವರ್ಧನ ಗಿರಿಯ
ಎತ್ತಿ ಪಾವನಗೊಳಿಸಿದವನ
ಗೋವುಗಳ ಕಾಯುತಲೇ ಗೋಕುಲವ
ಜತನದಿ ಕಾಪಾಡಿದ ಗೋಪಾಲಕನ
ಯಮುನೆಯ ಒಡಲಲೇ ಕಾಳಿಂಗನ ಶಿರವೇರಿ
ನರ್ತಿಸುತ ಅವನ ವಿಮೋಚಿಸಿದವನ
ಪಿಳ್ಳಂಗೋವಿಯ ನುಡಿಸುತಲೇ
ಕೇಳಿದವರ ಮನವ ಸಮ್ಮೋಹಿಸಿದವನ
ನಾರಿಯರ ಉಡುಗೆ ಕದ್ದು ಗೋಳಾಡಿಸುತಲೇ ನಾಚಿದ ನೀರೆಯರ ಹೃದಯ ಕದ್ದವನ
ಕಣ್ಣಂಚಿನ ನೋಟದಲೆ ಕನಸ ಬಿತ್ತಿ
ಮನವ ಹಣಕಿಸಿ ಕೆಣಕಿದವನ
ರಾಧೆಯ ಉಸಿರಲೇ ಬೆರೆತು
ಆತ್ಮ ಸಂಗಾತಿಯಾದವನ
ದೂರ ನಿಂತರು ರುಕ್ಮಿಣಿಯ ಮನವನೋದಿ
ಅಪಹರಿಸೇ ಪರಿಣಯಿಸಿದವನ
ಮಧ್ಯಮ ಪಾಂಡವನ ಪೂಜ್ಯರೂಪಿಯು
ವಿಶ್ವರೂಪ ದರುಶನ ತೋರಿ ಧರ್ಮ ಯುದ್ಧವ ಸಾರಿದವನ
ಕಣ್ಣಿಗೆ ಪಟ್ಟಿಯ ಕಟ್ಟಿ ತ್ಯಾಗ ಧರ್ಮದ ಮಾತಿಗೆ
ಬಾಗಿ ಹುಲ್ಲಿನ ಕಡ್ಡಿಗೆ ತನ್ನ ಜೀವವ ತೆತ್ತವನ
ಕಂಡೆನ ನೀಲ ಮೇಘ ಶ್ಯಾಮನ....
- ಶ್ರೀಕಾವ್ಯ
15 Apr 2017, 09:09 pm
Download App from Playstore: