ಕನಸು
ಕಪ್ಪು ಗಗನದ ಆಗಮನ
ನಿದ್ರಾದೇವಿಯ ಆಹ್ವಾನ
ನಿದ್ರದೇವಿಯ ಮಡಿಲೊಳಗೆ ಜಾರಿರಲು ಸೋಪಾನ ಇಲ್ಲದಿದ್ದರೇನು
ಎಲ್ಲವು ಸುಖದ ಸೋಂಪಾನ
ನಿನಗಾಗಿ ಕಾದಿಹುದು ಸಿಹಿಗನಸಿನ ಝೇಂಕಾರ
ನನಸಾಗದಿದ್ದರೇನು ಕನಸು
ಕಟ್ಟು ಕನಸೊಳಗೊಂದು ಕನಸು
ನಾಳೆಗಿನ ಬದುಕಿಗಾಗಿ ಕನಸು
ಸುಖ ಸಂತೋಷ ನೆಮ್ಮದಿಯ ಕನಸು
ಕನಸೇ ನನಸೆಂದು ಬೀಗದಿರು
ಆ ಕನಸಲೇ ಕಾಲ ಕಳೆಯದಿರು
ಕನಸೊಂದೆ ಕಟ್ಟದು ಬದುಕು
ಕನಸೇನಿದ್ದರು ನಾಳಿನ ಬದುಕಿಗೆ ಬೆಳಕು
- ಶ್ರೀಕಾವ್ಯ
17 Apr 2017, 09:24 pm
Download App from Playstore: