ಮಂಜಿನ ಶಿಲ್ಪ
ಕಲೆಗಾರನ ಕಲ್ಪನೆಯ ಕೆತ್ತನೆ
ಅಪರೂಪದ ಆ ಮಂಜಿನ ಶಿಲ್ಪ!!
ಚಂದ್ರನ ಚೂರೊಂದು ಭೂಮಿಗೆ
ಬಿದ್ದು ಜನಿಸಿದಂತೆ ಆ ಶಿಲ್ಪದ ರೂಪ!!
ಅಪೂರ್ವ ಸುಂದರಿಯಾದ
ಹೆಣ್ಣಿನ ರೂಪವು ಆ ಮಂಜಿನ ಶಿಲ್ಪ!!
ಪರ್ವತ ಶ್ರೇಣಿಯ ಮಡಿಲಲಿ
ಜನನವಾಯಿತು ಆ ಸುಂದರ ಶಿಲ್ಪ!!
ಕಲೆಗಾರ ಮನಸೋತನು ಆ
ಅಪರೂಪದ ಮಂಜಿನ ಚೆಲುವೆಗೆ!!
ಮನಸೋತು ಹಂಬಲಿಸಿ
ಬಯಸಿದನು ಅವಳ ಒಲವಿನ ಸಲಿಗೆ!!
ಕಣ್ಮುಚ್ಚಿ ಸಾವಿರ ಕಲ್ಪನೆಗಳ
ಹೆಣೆಯುತ್ತ ಆ ಕಲೆಗಾರ ಮೈಮರೆತ!!
ಕಣ್ತೆರೆದು ನೋಡಲು ಆ ಶಿಲ್ಪವು
ಕರಗಿ ನೀರಾಗಿ ಹರಿದಿತ್ತು ಅವನ ಸುತ್ತ!!
- ಪಿ.ಜಿ.ಜ್ಯೋತಿ
18 Apr 2017, 11:10 am
Download App from Playstore: