ಅವನ ಒಲವು
ಅವನ ಒಲವ ಸಿರಿಗೆ
ಸವಿ ಮಾತ ಪರಿಗೆ
ಮನಸೋತ ನಲ್ಲೆ ನಾನು!!
ಆ ನೀಳ ನಿಲುವ
ಹೊದ್ದಿರುವ ತನುವ
ಬಯಸಿಹುದು ನನ್ನ ಮನವು!!
ಕುಡಿ ನೋಟದಲ್ಲೇ ನಾ ಸೆಳೆವೆ ಅವನ
ಎಂದು ನುಡಿದ ನನ್ನ ಕಣ್ಣು
ನಾಚಿಹುದು ಅವನ ಕಂಡು!!
ಅವನೆದುರು ನಿಂದು
ಮೂಕಾಗಿ ಹೋದ
ಮಾತಿನ ಮಲ್ಲಿ ನಾನು!!
ತೆರೆದಿರುವ ಮನದ
ಈ ಖಾಲಿ ಪುಟದಿ
ಅವನ ಹೆಸರ ಬರೆದೆ ನಾನು!!
- ಪಿ.ಜಿ.ಜ್ಯೋತಿ
18 Apr 2017, 11:52 am
Download App from Playstore: