ಆತ್ಮಾವಲೋಕನ

ಗೆದ್ದವರ ನೋಡಿ
ಚಡಪಡಿಸುವೆ
ಗೆಲ್ಲಲಾಗದೆ ಕಣ್ಣೀರು
ಸುರಿಸುವೆ
ಸಾಕು ಮಾಡು ಮನವೆ!

ಅಡಿ ಮುಂದಿಡದೆ
ಅಂಬಾರಿ ಏರುವಾಸೆ
ಕಷ್ಟಪಡದೆ ಕನಸಿನ
ಕೋಟೆಯಲಿ ಮೆರೆಯುವಾಸೆ
ಎದ್ದೇಳು ಮನವೆ!

ಸಣ್ಣ ತೂತು ಸಾಕು
ಉರಿ ಶಮನಗೊಳ್ಳಲು
ದೊಡ್ಡ ಪ್ರಯತ್ನ ಬೇಕು
ಸಾಧನೆಯ ಶಿಖರವೇರಲು
ಮುನ್ನುಗ್ಗು ಮನವೆ!

ಕಾಣದ ಗುಡಿಯಲಿ
ಕಣ್ಮುಚ್ಚಿ ಕುಳಿತಿರುವೆ
ಕಣ್ಣೀರ ಕಡಲಲಿ
ನಮ್ಮೆಲ್ಲರ ತೇಲಿಸುವೆ
ಏನು, ನಿನ್ನ ಲೀಲೆ ವಿಧಿಯೆ!


ಶಾರಧ

- ಶಕುಂತಲಾ

18 Apr 2017, 02:51 pm
Download App from Playstore: