ಮಲ್ಲಿಗೆಯಂತ ಅಮ್ಮ

ನೀರುಹಾಕುತಾ ನೋಡುತ್ತಿದ್ದೆ
ಅಮ್ಮ ನೆಟ್ಟ ಮಲ್ಲಿಗೆಯ..
ಕಂಡು ಪುಳಕಿತಗೂಂಡೆ
ಅದರ ಮುಗ್ದತೆಯ....

ಅನಿಸಿತೆನೆಗೆ ಅದಕ್ಕಿಲ್ಲ ಮುದುಡುವ..
ಭಯ ಭೀತಿ..
ನಲಿಯುತಿತ್ತು ಮುದುಡಿದರೂ
ಮತ್ತೆ ಹುಟ್ಟಿಬರುವೆನೆಂಬ ರೀತಿ....

ಯಾರಿಗೂ ತೋರುವುದಿಲ್ಲ
ಭೇದ ಭಾವವ..
ಎಂದಿಗೂ ಬಯಸುವುದಿಲ್ಲ
ಯಾವ ಸನ್ಮಾನವ....

ಮೌನವಾಗಿ ಶಿಖರವೇರುವುದು
ದೇವರ ಗುಡಿಯಲ್ಲಿ..
ಸುಮ್ಮನೆ ಕುಳಿತಿರುವುದು
ಹೆಂಗೆಳೆಯರ ಜಡೆಯಲ್ಲಿ....

ಅಚ್ಚರಿಯಾಯಿತು ಕಂಡು
ಅದರ ಪ್ರೀತಿಯ..
ಬಯಸದೇ ಬೀರುವ
ಮಧುರ ಸುವಾಸನೆಯ....

ಮೂಕಸ್ಮಿತಳಾದೆ ಕಂಡು
ಅದರ ನೀತಿಯ..
ಮೌನಳಾದೆ ಅರಿತು
ಅದರ ಹಿಂದಿನ ಮರ್ಮವ....

ಇದ್ದಾಳೆನಿಸಿತು ಅಮ್ಮ
ಮಲ್ಲಿಗೆಯ ಗಿಡದಲ್ಲಿ..
ಬಾಳಿನ ರೀತಿ ತಿಳಿಸಲು
ಹೂವಿನ ನೆಪದಲ್ಲಿ....

ಸದಾ ಇರುವ ಅಮ್ಮನ ನೆನಪಿನಲಿ..
ಬಾಳುವ ಅವಳಂತೆ ಬಾಳಿನಲಿ....

- KR Sreekamala

18 Apr 2017, 05:19 pm
Download App from Playstore: