ತಂಗಾಳಿ
ತಂಪು ತಂಗಾಳಿಯು ಸೂಸಿ
ನಡೆದಿರಲು ತನುವಿಗೆ ಸೋಕಿಸಿ
ಮನಸ ಹೂವಂತೆ ಅರಳಿಸಿ
ಮೈ ಮನವ ಹಿಗ್ಗಿಸಿ
ಕನಸುಗಳ ಎದೆಯಲಿ ತೇಲಿಸಿ
ಸಿಹಿ ನೆನಪಿನ ಅಲೆಯ ಎಬ್ಬಿಸಿ
ಬದುಕು ಈ ಕ್ಷಣವ ಮೋಹಿಸಿ
ಮನಸು ಬದುಕ ಪ್ರೀತಿಸಿ
ಕಹಿಯ ನೆನಪೆಲ್ಲವ ಮರೆಸಿ
ಕನಸೆಲ್ಲವ ಮನಸಲಿ ಜೋಡಿಸಿ
ಮಾಡಿಹುದು ಮೋಡಿ ನನ್ನ ನಗಿಸಿ
ನನ್ನೇ ನಾ ಪ್ರೀತಿಸುವಂತೆ ಮಾಡಿದೆ ಕಣ್ಣ ತೆರೆಸಿ
- ಶ್ರೀಕಾವ್ಯ
18 Apr 2017, 09:56 pm
Download App from Playstore: