ಬಯಕೆ

ಅದೆಂಥಾ ಚೆಲುವು ಗೆಳತಿ ನಿನ್ನದು
ಆ ಚೆಲುವಿಗೆ ಮರೆತೋದೆ ನನ್ನನು||ಪ||

ಮೆಚ್ಚಿರುವೆ ಚಲುವೆ ಪ್ರೀತಿಸಲೇಬೇಕೆಂದು
ಹುಚ್ಚಾದೆ ಹುಡುಗಿ ಪ್ರೀತಿ ಪಡೆಯಲೆಂದು
ಮರೆಯ ಬೇಕೆನಿಸಿದೆ ಗೆಳತಿ
ಜಗವನ್ನೆಲ್ಲಾ ನಿನ್ನ ಪ್ರೀತಿಯಲಿ||೧||

ಕಂಗಳ ಕಾಂತಿಯಲಿ ಎಲ್ಲ ದು:ಖವನ್ನು ಕರಗಿಸಿ
ನಿನ್ನ ಕಂಗಳಲಿ ಸದಾ ನಲಿಯಬೇಕು
ಮಗುವಂತೆ ನಿನ್ನ ಮಡಿಲಲ್ಲಿ ಮಲಗಬೇಕು
ಕರೆದು ಮೆರೆಸುವೆಯಾ ನಿನ್ನ ಮನದಲಿ!||೨||

ಕಾಯುತಿರುವೆನು ಚಲುವೆ ನಿನ್ನ ಆ ಕಿರುನೋಟದ ಪ್ರೀತಿಗೆ
ತ್ರಿಲೋಕ ಸುಂದರಿ ನೀ..
ಆಗು ಬಾ ಈ ಮೌನಿಯ ಒಡತಿ
ಬೆಳಗು ಬಾ ನನ್ನ ಬಾಳ ಜೋತಿ||೩||

*ಮೌನಿ*
(9739651101)

- ಮೌನಿ

19 Apr 2017, 08:24 am
Download App from Playstore: