ಎಲ್ಲವು ನೆನಪಿದೆ ನನಗೆ

ನಾ ಕಂಡ ದಾರಿಯಲಿ ಎಲ್ಲವು‌ ನೆನಪಿದೆ ನನಗೆ
ಅದೆಲ್ಲವ ನಾ ಹೇಗೆ ವಿವರಿಸಲಿ ನಿನಗೆ

ನೀ ದೂರ ನಿಂತಾಗ ಕಾಯುತಿದೆ‌ ಮನಸು‌‌ ನಿನ್ನ ಬಯಸುತ
ಕಾಣಲಾಗದ ನಿನ್ನ ಬಿಂಬವ ತುಂಬಿಕೊಳ್ಳಲು‌ ನಿರೀಕ್ಷಿಸುತ
ನೀನೆದುರು‌ ನಿಂತಾಗ ಮಾತಾಗದ ಮೌನ
ಮೊಗವ ನೋಡಲಾಗದ ಬಿಡಿಸಲಾಗದ ಸಂಕಟ

ಆಡುವಾಗ ಮಾತು ನೀನೆದುರು‌ ನಿಂತು ‌ನನ್ನ ನೋಡುತ
ಒಮ್ಮೆ ಬರಸೆಳೆದು‌ ಅಪ್ಪಿ ಬಿಡಲೇನು
ಮಡಿಲಲಿ ಮಲಗಿ‌ ಮಗುವಂತೆ ಅತ್ತು ಬಿಡಲೇನು
ನನ್ನೆಲ್ಲ ಭಾವನೆಗಳ ಕಂತೆಗಳನು‌ ನಿನ್ನೆದುರು ಹರವಿಬಿಡಲೇನು
ನನ್ನೆಲ್ಲ ಕನಸುಗಳ ಪಾಲುದಾರಿಕೆಯ ಕೊಟ್ಟು ಬಿಡಲೇನು
ಮನಸಿದು ಕಾಡುತಿಹುದು ನೂರು ಯೋಚಿಸುತ
ನೂರಾರು ಮಾತು ಮನಸಲಿ‌ ನಾ ಹೇಗೆ ತಿಳಿಸಲಿ

ಸಾವಿರ ಪ್ರಶ್ನೆಗಳು ಮನಸಲಿ
ಅವುಗಳ ಬಿಡಿಸದೆ ಹೇಗೆ ಬದುಕಲಿ ನಗುನಗುತ ಮೌನದಲಿ
ಮೌನವು ನನ್ನೊಳಗೆ ಸೃಷ್ಟಿಸುವ ಯುದ್ಧಕೆ ಏನೆಂದು ಉತ್ತರಿಸಲಿ
ಆ ಸಮರದಲೂ‌ ನಾ ಹೇಗೆ ನಿಶ್ಕಲ್ಮಶವಾಗಿ ಜೀವಿಸಲಿ
ಸಾವದಾನದಲಿ ಕಾಯುವ ಶಕ್ತಿಯುಂಟು‌ ನನ್ನಲಿ
ಎಲ್ಲ‌ ಪ್ರಶ್ನೆಗಳ ಬಿಡಿಸಿ ಉತ್ತರಿಸುವ‌ ಮನಸುಂಟೆ ನಿನ್ನಲಿ

- ಶ್ರೀಕಾವ್ಯ

19 Apr 2017, 10:57 am
Download App from Playstore: