ಗಜಲ್

*ಗಜ಼ಲ್-೧೬*


ಮೋಹದೊಳಗಿನ ಎಸಲುಗಳ ಬಿಡಿಸಿ ಎದೆಕವಾಟಕ್ಕೆ ತುರುಕಬೇಕು ಈಗ
ಹೊಲಿಗೆ ಬಾಯಿ ತೆರೆದು ಮುತ್ತಿನ ಮಳೆಯ ನೀ ಸುರಿಸಬೇಕು ಈಗ

ಉರಿವ ಚಿಮಣಿ ಬತ್ತಿಸಬೇಡ ಬೆಳಕು ಇನ್ನೂ ಇರಲಿ ಸಾಕಿ
ನನ್ನೊಲವಿನ ರಾತ್ರಿಯ ಚುಕ್ಕಿ ಚಂದಿರ ಬೆಳಗಬೇಕು ಈಗ

ನಡೆದ ದಾರಿಯ ಹೆಜ್ಜೆ ಕೂಡ ಅಣುಕಿಸಿದ ಪ್ರಸಂಗ ನೆನಪಾಗುತ್ತದೆ
ಮರಳಿ ಹೊರಬಿದ್ದ ಗೂಡ ನಾವಿಬ್ಬರೂ ಸೇರಬೇಕು ಈಗ

ತಿರುಗೋ ಮುಳ್ಳಿಗೆ ಕಡಿವಾಣ ಏನಿದೆ ಜಗದ ನಿಯಮಗಳಲ್ಲಿ
ಜನನ ಮರಣದ ನಡುವೆ ಹೋರಾಡಿ ಒಲವ ಪಡೆಯಬೇಕು ಈಗ

ಹೃದಯ ವೀಣೆಯ ನಾದಕ್ಕೆ ನನ್ನ ನಿನ್ನೆಯೂ ಕುಣಿಯುತ್ತಿತ್ತು
'ಅವಿಜ್ಞಾನಿ'ಯ ಬರಡು ಎದೆಗೆ ಪ್ರೇಮ ನೀ ಸಿಂಪಡಿಸಬೇಕು ಈಗ

ಅವಿಜ್ಞಾನಿ

- ಅವಿಜ್ಞಾನಿ

19 Apr 2017, 01:46 pm
Download App from Playstore: