ಸುದೂರ ಪಯಣ

ಸುದೂರ ಪಯಣದಲ್ಲಿ
ಸಾಗದೆ ಹಿಂಜರಿದ ಒಂದು
ನಾವಿಕನ ದೋಣಿ .........

ಯಾವ ತೀರ ತನ್ನದು ಎಂದು
ತಿಳಿಯಲಿಲ್ಲವೋ ಅಥವಾ
ಮುಂದಿರುವ ದಾರಿ ಮರೆತಿದಿಯೋ...

ಮರದಲ್ಲಿ ಕೊಂಬೆಯಂತಿದ್ದ
ಈ ಜೀವ ಕಡೆದವರಿಗೆ ಕೈ ತುತ್ತು ಕೊಟ್ಟಿದೆಯಲ್ಲಾ........

ಉಸಿರಾಡುತ್ತಿದ್ದ ಪ್ರತಿಕ್ಷಣ
ಇತರರಿಗಾಗಿ ತನ್ನ ಜೀವನ
ಆದರೀಗ ದಾರಿತಿಳಿಯದೆ ನಿಂತಿದೆಯಲ್ಲಾ..........

ಸಾಗರದ ಮಧ್ಯದಲ್ಲಿ
ಸೋತು ನಿಂತಿದೆಯಲ್ಲಾ
ಈ ಕಡಲಿನ ಯಾವ ತೀರಕೆ ಇದರ ಪಯಣ................

- ಚುಕ್ಕಿ

20 Apr 2017, 10:56 pm
Download App from Playstore: