ಶ್ರೀ ಕೃಷ್ಣ
ಲಾಲಿ ಹಾಡಲೇ ಮದನಗೋಪಾಲ
ಮುದ್ದು ಮುದ್ದು ಮಾತಾನೇಳಲು
ಇದು ಸಮಯವಲ್ಲ......
ಮಲಗು ನನ್ನ ಚಿನ್ನಿ ಕೃಷ್ಣಾ
ಕರೆದರಾಯಿತು ನಿನ್ನ ರಾಧೆಯನ್ನ
ಪ್ರೀತಿಮಾಡಲು ಕನಸಲಿ ನಿನ್ನ ...
ಕದ್ದು ಕದ್ದು ಬೆಣ್ಣೆಯನೆಲ್ಲಾ
ನಿನ್ನ ದೇಹ ಸೋತಿದೆಯಲ್ಲಾ
ಮಾತಿಲ್ಲದೆ ಮಲಗೋ ಕೃಷ್ಣ ......
ನಿದ್ದೆ ನಿನ್ನ ಬರುವಿಕೆಯನ್ನೇ ತಾ
ಮಲಗದೆ ಕಾದು ನೋಡಿದೆ.
ಪವಳಿಸು ಪ್ರಾಣನಾದ ಚುಕ್ಕಿಗಳ
ಸೊಬಗನ್ನು ಕರೆತರಲು ನನಗಾಗಿ.
ನಿದ್ರಿಸು ನನ್ನ ಶಶಿವಧನ ನೀನು
ನಿನ್ನ ಮನವರಿಕೆಯಲ್ಲಿ ನಿನ್ನೊಡನೆ
ನಗುತಿಹ ಶಶಿವಧನೆ ನಾನು.
ನೋಡು ಕಂಗಳೆಲ್ಲಾ
ಮರೆತುಹೋಗಿವೆ ನಿದ್ದೆಯ ಕಳ್ಳ
ಗೋಪಿಕೆಯರ ಪ್ರಿಯತಮ ನೀನು
ನಿನ್ನ ಮನಸು ಕದ್ದ ಪ್ರಿಯತಮೆ ನಾನು.......
ಸಿಕ್ಕರಾಯಿತು ನಾಳೆಯ ದಿನಕೆ
ಕದ್ದರಾಯಿತು ಬೆಣ್ಣೆಯ ಮಡಿಕೆ...
ಮಲಗು ಮುದ್ದು ಕೃಷ್ಣ ನನ್ನ ಮುದ್ದು ಕೃಷ್ಣ .......
ಮರೆಯಬೇಡ ನೀನು
ನನ್ನ ನೋಡಲು ಬರುವುದು ಇನ್ನು.....
ಕನಸು ನಿನ್ನ ಕರೆದಿದೆಯಲ್ಲಾ
ಅಲ್ಲಿ ಇರುವುದು ನಾನೇನಲ್ಲಾ........
ನಿನ್ನ ಪ್ರೀತಿ ಬಿಂಬ ನನ್ನದೇನೆ
ಹಾಗಿದೆಯಲ್ಲಾ.......
ಲಾಲಿ ಹಾಡಲೇನು ನನ್ನ
ಮುದ್ದು ಕೃಷ್ಣ ಮಾತಿಲ್ಲದೆ ಮಲಗೋ ಮೋಹಣಾಕಾರ................
ಶ್ರೀಕೃಷ್ಣ
- ಚುಕ್ಕಿ
21 Apr 2017, 06:43 am
Download App from Playstore: