ನಾ ನಿನ್ನ ಮರೆಯಲಾರೆ

ಮರೆಯಲಾರೆ ಚಿನ್ನ, ನಾ ನಿನ್ನ,
ನೀ ಮರೆತಿರಬಹುದು ನನ್ನ,
ಆದರೆ ಮರೆಯಲಾರದು ನಿನ್ನ, ನನ್ನ ಮನ.

ಕಾಲಗಳು ಕ್ರಮೇಣ ಉರುಳಬಹುದು,
ಋತು ಚಕ್ರಗಳು ಕಳೆಯಬಹುದು,
ಸಮಯ ಸಂದರ್ಭಗಳು ಬದಲಾಗಬಹುದು,
ಬಹುಶಃ ನಿನ್ನ ನೆನಪಿನಲ್ಲಿಲ್ಲ ನಾನು,
ನನ್ನ ನೆನಪಿನಲ್ಲಿರುವೆ ಎಂದೆಂದಿಗು ನೀನು.

ಸೂರ್ಯ ಪ್ರತಿದಿನ ಹುಟ್ಟುವುದನ್ನು ಮರೆತರು,
ಚಂದ್ರ ಬೆಳದಿಂಗಳು ಚೆಲ್ಲುವದನ್ನು ಮರೆತರು,
ನಕ್ಷತ್ರಗಳು ಬಾನಿನಲಿ ಹೊಳೆಯುವುದನ್ನು ಮರೆತರು,
ನಾನೆಂದಿಗೂ ಮರೆಯಲಾರೆ ನಿನ್ನ ನೆನಪನ್ನ,
ನನ್ನೆ ನಾ ಮರೆತರು , ಮರೆಯಲಾರೆ ನಿನ್ನ.

ಕಾಲಗರ್ಭದಲಿ ಮರೆಯಾಗಿ ಸಮಯದ ಕೈಗೊಂಬೆಯಾದೆವು.
ಹೊಸ ದಾರಿ ಹೊಸ ಜೀವನ ಕಂಡುಕೊಂಡೆವು.
ಜವಾಬ್ದಾರಿಯಾರು ಹೊತ್ತು ದೂರ ಸರಿದೆವು,
ಹೊಸತನಕ್ಕೆ ಹಳೆಯದನ್ನು ಮರೆತಿರಬಹುದು ನೀನು,
ಕೊನೆಯುಸಿರೆಳೆದರು ಮರೆಯುವುದಿಲ್ಲ ನಿನ್ನ ನಾನು.

- ರವೀಂದ್ರಬಾಪೂರ(GNL)

23 Apr 2017, 03:33 pm
Download App from Playstore: