ನಿನ್ನ ಆಗಮನ...
ದೂರವಾಗಿದೆ ನೆನಪು ದೂರವಾಗಿದೆ
ಭಾರವಾಗಿದೆ ಮನಸು ಭಾರವಾಗಿದೆ
ನೀನಿಲ್ಲದ ಈ ಮನಸು ಸೊರಗಿ ಹೋಗಿದೆ..!!.ಪ..!!
ದಾರಿ ಕಾಣದೆ ನನಗೆ ದಾರಿ ಕಾಣದೆ
ಮೌನವಾಗಿದೆ ಹೃದಯ ಮೌನವಾಗಿದೆ
ನೀನಿಲ್ಲದ ಹೃದಯ ಬಡಿತ ಮರೆತು ಹೋಗಿದೆ
ಬಿಸಿಲು ತುಂಬಿದೆ ಸುಡುವ ಬಿಸಿಲು ತುಂಬಿದೆ
ನೆರಳು ಇಲ್ಲದೆ ನಿನ್ನ ನೆರಳು ಇಲ್ಲದೆ
ನನ್ನ ರೂಪ ನನಗೆ ಇಂದು ಮಾಯವಾಗಿದೆ
ಸೋತು ನಿಂತಿದೆ ದೇಹ ಸೋತು ನಿಂತಿದೆ
ಸ್ಪರ್ಶವಿಲ್ಲದೆ ನಿನ್ನ ಸ್ಪರ್ಶವಿಲ್ಲದೆ
ನಿನ್ನ ಆಲಿಂಗನದ ಅರಿವು ಇಲ್ಲದೆ
ಮಂಜು ತುಂಬಿದೆ ನಯನ ಮಂಜು ತುಂಬಿದೆ
ಮಾತು ಬಾರದೆ ನನಗೆ ಮಾತು ಬಾರದೆ
ನಿನ್ನ ಆಗಮನದ ಸುಳಿವು ಕಾಣಲಾರದೆ...
- Irayya Mathad
23 Apr 2017, 11:25 pm
Download App from Playstore: