ಅವಳು......
ಅವಳದೊ ಸರಳ ಸುಂದರ ಬದುಕಿನ ಸ್ತುತಿ
ಬದುಕುತಿತ್ತು ಮುಗ್ಧ ಗಿಳಿಯ ರೀತಿ
ಹಾರುತಿತ್ತು ಎಲ್ಲೆ ಇಲ್ಲದೆ ಎಲ್ಲವ ಸುತ್ತಿ
ಮೂಕ ಹಕ್ಕಿಯ ಕನಸಿಗಿರಲಿಲ್ಲ ಪರಿಮಿತಿ
ಬಂದನು ಚೆಲುವ ಬಂಗಾರದ ಪಂಜರ ಹೊತ್ತಿ
ಮೋಹಕೆ ಸೋತು ಸಿಲುಕಿತು, ಪಂಜರವ ಹತ್ತಿ
ಎಲ್ಲಿ ನೋಡಿದರು ಪಂಜರದ ಮಿತಿ
ಇನ್ನು ಸರಳುಗಳ ಒಳಗಿನದೇ ಭೀತಿ
ಹೊತ್ತು ತಂದ ಬಂಧನದಲಿ ಕಾಣಲಾಗದ ಪ್ರೀತಿ
ತೂಗಿತ್ತು ಅವಳ ಮನದ ಮೇಲೆ ನೋವಿನ ಕತ್ತಿ
ಕಂಡವರಿಗಾಗಿ ಆಡುತಿತ್ತು ಮಾತು, ಕನಸ ಝರಿಯೇ ಬತ್ತಿ
ಅದರೊಳಗೂ ಬದುಕುವುದು ಅದರ ಅನಿವಾರ್ಯ ಸ್ಥಿತಿ
- ಶ್ರೀಕಾವ್ಯ
24 Apr 2017, 01:17 pm
Download App from Playstore: