ಈಡೇರದ ಆಸೆ....

ಹುಟ್ಟಿದಳು ಸೀತೆ ಮಿಥಿಲೆಯ
ರಾಜಕುಮಾರಿಯಾಗಿ..
ಕನಸು ಕಂಡಳು ಅಯೋಧ್ಯೆಯ
ಪಟ್ಟದ ರಾಣಿಯಾಗಿ..
ಸೇರಿದಳು ಶ್ರೀರಾಮಚಂದ್ರನ
ಮನದೊಡತಿಯಾಗಿ....

ನುಲಿದಳು ಕೈಕೇಯಿಯ
ಹೊಟ್ಟೆಕೆಚ್ಚಿನ ಕಿಡಿಗಾಗಿ..
ನಡೆದಳು ವನವಾಸಕ್ಕೆ
ಶ್ರೀರಾಮನ ಜೊತೆಯಾಗಿ....

ಸಣ್ಣ ಆಸೆಪಟ್ಟಳು ಚಿನ್ನದ
ಜಿಂಕೆಗಾಗಿ..
ಸೇರಬೇಕಾಯ್ತು ಲಂಕೇಶ್ವರನ
ಸೆರೆವಾಸಿಯಾಗಿ..
ಹರಿಯಿತು ಕಣ್ಣೀರು 12 ವರ್ಷ
ಕೋಡಿಯಾಗಿ....

ಸಂತಸ ಪಟ್ಟರೂ ಬಂಧನದಿಂದ
ಮುಕ್ತಳಾಗಿ..
ಬಸವಳಿದಳು ಅಗ್ನಿ ಪರೀಕ್ಷೆಯಿಂದ
ಈ ಸಮಾಜಕ್ಕಾಗಿ..
ಹಿಂದಿರುಗಿದಳು ಅಯೋಧ್ಯೆಗೆ
ಅಳುಕಿನಿಂದ ಪಟ್ಟದ ರಾಣಿಯಾಗಿ....

ಅಧೃಷ್ಠ ಕೈಹಿಡಿಯಲಿಲ್ಲ
ಈಗಲೂ ವಿಧಿಯಿಂದಾಗಿ..
ಗರ್ಭಿಣಿಯಾದರೂ
ಸೇರಬೇಕಾಯ್ತು ಕಾಡು
ಕೇವಲ ಒಬ್ಬ ಅಗಸನ
ಮಾತಿನ ಸಲುವಾಗಿ....

ಹುಟ್ಟಿದರು ಲವ ಕುಶ
ಮುದ್ದು ಮಕ್ಕಳಾಗಿ..
ಪರಿತಪಿಸಿತು ಅವಳ ಮನ
ಮಕ್ಕಳ ದುರಾದೃಷ್ಟಕ್ಕಾಗಿ....

ಬಂದ ಶ್ರೀರಾಮ ಕರೆದೊಯ್ಯುವುದಾಗಿ
ಎಲ್ಲರನೂ ತನ್ನ ಜೊತೆಯಲಿ..
ಲವಕುಶರನ್ನ ಜೊತೆ ಕಳಿಸಿ
ಅಲ್ಲೇ ನಿಂತಳು ಮಾತೆ
ತನ್ನ ವಿಧಿಬರಹ್ಕೆದರಿ....

ಈ ಜನ್ಮ ಸಾಕೆಂದು
ಯೋಚಿಸಿ ನಿರ್ಧರಿಸಿ..
ಸೇರಿದಳು ಭೂತಾಯಿಯ ಒಡಲನು
ದಾರುಣ ಸೀತಾಮಾತೆಯೆನಿಸಿ....

ಕಥೆಯಾದಳು ಸೀತಾಮಾತೆ
ಈಡೇರದ ಆಸೆಗಾಗಿ..
ತನ್ನ ವಿಧಿಬರಹಕ್ಕಾಗಿ ತೊಯ್ದು
ಕರ್ತವ್ಯಕ್ಕೆ ಓಗೂಟ್ಟು ತೋರಿದಳು
ಮನುಜರಿಗೆ ಓರ್ವ ಆಧರ್ಶಿಣಿಯಾಗಿ....

- KR Sreekamala

24 Apr 2017, 06:06 pm
Download App from Playstore: