ನಿವೇದನೆ

ಓ ನನ್ನ ಕಾವ್ಯಕನ್ನಿಕೆ
ನಿನ್ನ ಜಿಂಕೆ ಕಂಗಳ ಮಿಂಚು
ಸಾಟಿಯೇ ನೂರುದೀಪಗಳ ಬೆಳಕಿಗೆ ?
ನಿನ್ನೀ ಜೋಡಿ ನಕ್ಷತ್ರಗಳ ಕಾಂತಿಯಲಿ
ನಿನಗಾಗಿ ಕಾದು
ನಿನಗಾಗಿ ಕಾತರಿಸಿ
ನೀ ಬರುವ ಹಾದಿಯಲಿ
ಕಾಯುತ್ತ ಕುಳಿತಿರುವ
ಈ ನಿನ್ನಾರಾದಕನ ಮೇಲೂ
ನಿನ್ನ ಕಂಗಳ ಬೆಳಕ ಚೆಲ್ಲೇ ಗೆಳತಿ

-ಅರೆಯೂರು ಚಿ.ಸುರೇಶ್
ಪತ್ರಕರ್ತರು
ತುಮಕೂರು

- ಅರೆಯೂರು ಚಿ. ಸುರೇಶ್

25 Apr 2017, 02:57 pm
Download App from Playstore: