ಹೆಚ್ಚು ಪ್ರಿಯರು....

ಬರೆಯುವವರಷ್ಟೇ ಪ್ರಿಯರು..
ದೇವರಿಗೆ..
ಓದಿ ಮೆಚ್ಚಿಗೆ ತೋರಿಸುವವರು....

ಹಾಡುವವರಷ್ಟೇ ಹತ್ತಿರದವರು..
ದೇವರಿಗೆ..
ಆಲೈಸಿ ಆನಂದಿಸುವರು....

ಚಿತ್ರಾಕಾರರಷ್ಟೇ ರಸಿಕರು..
ದೇವರಿಗೆ..
ಅದನ್ನ ಮೆಚ್ಚಿ ಬಣ್ಣಿಸುವರು....

ನಾಟಕಗಾರರಷ್ಟೇ ಯೋಗ್ಯರು..
ದೇವರಿಗೆ..
ಅವರನ್ನು ಅಭಿನಂದಿಸುವರು....

ಪೂಜಿಸುವವರಷ್ಟೇ ಭಕ್ತಿವಂತರು..
ದೇವರಿಗೆ..
ಭಕ್ತಿಯಿಂದ ಭಾಗವಹಿಸುವರು....

ಏಕೆಂದರೆ..
ಮೆಚ್ಚುಗೆ ತೋರುವವರಲ್ಲಿ..
ಆಲಿಸಿ ಆನಂದಿಸುವರಲ್ಲಿ..
ಬಣ್ಣಿಸುವರಲ್ಲಿ ಅಭಿನಂದಿಸುವರಲ್ಲಿ..
ಭಾಗವಹಿಸುವರಲ್ಲಿ ಇರುವ
ನಿಷ್ಕಲ್ಮಷ ಮನಸೇ ಇಷ್ಟ
ಆ ಸೃಷ್ಟಿಕರ್ತ ದೇವರಿಗೆ....

- KR Sreekamala

25 Apr 2017, 07:05 pm
Download App from Playstore: