ಪ್ರತಿಬಿಂಬ.................✍

ನಿನಗೆ ತಿಳಿಸುವೆ ಗೆಳೆಯ ನನ್ನ
ಹೃದಯದಲ್ಲಿ ಅಡಗಿರುವ
ರೂಪದ ಪ್ರತಿಬಿಂಬವೊಂದು.............

ನನ್ನ ನಯಣದಲ್ಲಿ ಪ್ರೀತಿಯಿಂದ
ನೋಡು ನೀನು ಹೃದಯ ತೋರುತ್ತೆ
ಆ ರೂಪ ನಿನ್ನದೇ ಎಂದೂ........

ತುಟಿಯ ದಾಟದ ಮಾತೊಂದು
ಮಾತನಾಡಿಸುತ್ತೆ ನಿನ್ನ........
ನನ್ನ ಕಣ್ಣಲ್ಲಿನ ನಿನ್ನ ರೂಪ ನನ್ನ
ಬಿಟ್ಟು ಬರಲಾರದೆಂದು.......

ಎದೆಯೇನೆಂಬ ಗುಹೆಯಲ್ಲಿ
ಗುಟ್ಟಾಗಿ ಬಚ್ಚಿಟ್ಟ ಪ್ರೀತಿಯನ್ನು
ತಲುಪಿದೆಯಾ ನೀನು.....
ಇಂದ್ರಾಚಾಪ ಹೊದಿಸಿ
ಆಹ್ವಾನಿಸಲೇ ನಾನು.....

ಅಮೃತ ಧಾರೆ ಹರಿಯುತ್ತಿದೆ
ನನ್ನ ಎದೆಯಲ್ಲಿ ನಿನ್ನ ಸೇರಲೆಂದು....
ನೆನೆದಾಗೆಲ್ಲಾ ನೀ ಮರೆಯಾದರೂ
ನಿನ್ನ ನೋಡಲೆಂದು......

- ಚುಕ್ಕಿ

25 Apr 2017, 08:58 pm
Download App from Playstore: