ಶಶಿ..

ಕತ್ತಲ‌ ಇರುಳಿಗೆ ಆದಿತ್ಯನ ನಿರ್ಗಮನ
ಎರವಲ ಪಡೆದು ಶಶಿಯ ಆಗಮನ
ತಾ ಪಡೆದುದೆಲ್ಲವ ಸವೆಸಿ ಬೆಳಗುತಿರುವ ಜಗವ
ಉಲ್ಲಾಸಿಸಿರುವ ಮನವ ಹೆಚ್ಚಿಸಿ ಉನ್ಮಾದವ
ಇರುಳ‌ ಮೆರುಗ ಅಲಂಕರಿಸಿರುವ ತಾರೆಗಳ ಜೊತೆಗಾರನಿವ
ನಕ್ಷತ್ರ ‌ಪುಂಜವ ಜೋಡಿಸಿ ನೋಡಿ ನಗುತಲಿರುವ
ಕಾಣಬಲ್ಲ‌ ಕಲೆಗಳನ್ನೆ ಮರೆಸಿ ಮೋಡಿಮಾಡಿರುವ
ಬೆಳಗುತಲೆ‌ ಜಗವ ‌ಕಾಣದೆ ಮರೆಯಾಗಿಬಿಡುವ
ಮಡಿಯುತ ಚುಕ್ಕೆಗಳೆಲ್ಲವ ಜೊತೆಗೆ ಒಯ್ಯುವ
ನಭವನೆ ಮಂಕಾಗಿಸಿ ಬೆಳಕ ಹಿರಿಮೆಯ ಸಾರಿರುವ
ತಾನೆ ಕರಗಿ‌‌ ಸೋತರು ನಗುತ ಮತ್ತೆ ತುಂಬಿ ಬೆಳಗುವ
ಸೋಲಿಗೆ‌‌ ಸೋತು‌ ಎಲ್ಲರ‌‌ ಮರೆತು ಸಾವಿಗೆ ಹವಣಿಸುವ‌‌‌ ಬದುಕಿಗೆ ಉತ್ತರವಾಗಿರುವ

- ಶ್ರೀಕಾವ್ಯ

25 Apr 2017, 11:18 pm
Download App from Playstore: