ಹೊತ್ತೊಯ್ಯುವ

ಸತ್ತವರ ಹೆಣಗಳನ್ನು ಹೊತ್ತೊಯ್ಯುವ ಹೆಗಲಿಗಿಂತಾ...........
ಬದುಕಿದ್ದಾಗ ಚಿತ್ರವದೇ ಕೊಟ್ಟು
ಮಾನಸಿಕವಾಗಿ ಸಾಯಿಸುವವರ
ಸಂಖ್ಯೆಯೇ ಜಾಸ್ತಿ.............

ರಣಹದ್ದುಗಳು ಮರುಭೂಮಿಯಲ್ಲಿ
ಸತ್ತ ಹೆಣಗಳ ಕಿತ್ತು ತಿಂದರೆ.........?
ರಕ್ತ ಬಾರದೆ,ಹೊಡೆದ ಹೊಡೆತದ
ಗುರ್ತುಕಾಣದೆ , ನಗುವಲ್ಲೇ ನರಕತೋರುವವರು
ಈ ಮಾನಹೀನ ಮಂದೆಯಲ್ಲಾ .........

ನನ್ನಲ್ಲಿ ಅಡಗಿರುವ ಆಕ್ರೋಶವೆಲ್ಲಾ
ಲಾವದಂತೆ ಉಕ್ಕಿ ಬರುತ್ತಿದೆ ಇವರನ್ನೆಲ್ಲಾ
ಸುಟ್ಟು ಬೂದಿ ಮಾಡಲೂ...........
ಗಡಿದಾಟಿದ ಸಮುದ್ರವಾದರು ತನ್ನ ರಭಸವ
ಕಳೆದುಕೊಳ್ಳಬಹುದು ದೂರ ಹೋದಂತೆ.......

ಯಾರ ಮೇಲೂ ಉಳಿದಿಲ್ಲ ಕಿಂಚಿತ್ತೂ
ನಂಬಿಕೆ ನನ್ನಲ್ಲಿ ................
ಆ ಪರಶಿವನ ರುದ್ರರೂಪ ಕಂಡಿರುವರೊ
ಇಲ್ಲವೋ ತಿಳಿದಿಲ್ಲ ನನಗೆ .........

ಒಂದುದಿನಾ ಈ ಘೋರಗಳು ಹೆಚ್ಚಿದಾಗ
ಕಾಣುತ್ತೆ ಆ ಅಗಸದಿಂದ ಈ ನೋವಣೋತ್ತ ಭೂತಾಯಿಯವರೆಗೂ ಸ್ಥಳವಿಲ್ಲದೆ
ಬಿದ್ದ ಹೆಣಗಳ ರಾಶಿ ...........

ದುರ್ಜನರ ದುರ್ಮಗ ಕೊನೆಗೊಂಡು
ಆ ಕಾಲಭೈರವ ಮಾಡುವ ಆನಂದ
ತಂಡವದ ಸಾಕ್ಷಿ........................

- ಚುಕ್ಕಿ

26 Apr 2017, 12:53 am
Download App from Playstore: