ನಡೆದಿರಲು ಮುಳ್ಳಿನ ಹಾದಿಯಲಿ......
ನಡೆದಿರಲು ಮುಳ್ಳಿನ ಹಾದಿಯಲಿ
ಹೂವಂತೆ ಬಂದೆ ನೀನು
ಜೊತೆಯಾಗಿ ಕೈ ಹಿಡಿದು ನಡೆದಿರಲು
ಹೂವೆ ಮುಳ್ಳಾಯಿತೇನು
ನನ್ನ ಮಡಿಲ ಚೆಲುವಿನ ಕೂಸು
ನನ್ನೊಲವ ಪ್ರೀತಿಗೆ ಅರಸು
ಹಿಂದಿರುಗಿ ನೋಡದೆ ಹೊರಟಿರುವೆ ಕಾಣದೆ ಸೊಗಸು
ನೆನಪಾಗದಾಯಿತೆ ಕಂಡ ಎಲ್ಲ ಕನಸು
ತಿರುಗಿ ನೋಡು ಸಾಕಿನ್ನು ಮುನಿಸು
ನಿನ್ನೆಲ್ಲ ಬಾಳ ಕ್ಷಣವ ನನ್ನೊಟ್ಟಿಗೆ ಸವೆಸು
ನಿನ್ನ ವಿನಹ ಬೇರೇನು ಕಾಣೆ ನನ್ನ ಸಹಿಸು
ನೀ ಕಂಡ ನನ್ನ ತಪ್ಪಿಗೆ ನನ್ನ ಮನ್ನಿಸು
ನನ್ನೆದೆಯ ಗೋಡೆಯಲಿ ನಿನ್ನದೆ ಹೆಸರು
ನಿನಗಾಗಿಯೇ ಕಾಯುತಿದೆ ನನ್ನುಸಿರು
ಕಣ್ದೆರೆದು ನೋಡು ನೀನಾಗಿಲ್ಲ ನನ್ನ ಶತ್ರು
ಮನಸರಿತು ಒಂದೊಮ್ಮೆ ಅಪ್ಪಿ ಮಾಡು ಬದುಕು ಹಸಿರು
ಮರೆಯದೆ ಸೇರು ನನ್ನ
ಉಸಿರು ಹಾರಿ ಹೋಗುವ ಮುನ್ನ
- ಶ್ರೀಕಾವ್ಯ
26 Apr 2017, 09:21 pm
Download App from Playstore: