ಕನಾಸೆ
ಕಂಗಳಲಿ ತುಂಬಿ ಕಡಲಾದ ಕನಸುಗಳ
ಹಂಚಲು ಹಿಡಿ ಬೊಗಸೆಯೇ ಸಾಕೆ ?
ಕಟ್ಟಿ ಕೆತ್ತಿದ ಕನಸುಗಳು
ಕಳೆದು ಹೋದೀತು ಜೋಕೆ !!!
ಆಗಸದಂತೆ ಹರಡಿದ ಆಸೆಗಳ
ಅರಿಯಲು ತಿಳಿ ಮನವೊಂದೇ ಸಾಕೆ ?
ಅರಿವಿಲ್ಲದೆ ಅರಳಿದ ಆಮಿಷಗಳು
ವಿಷವಾದೀತು ಜೋಕೆ !!!!
- Prabhath
28 Apr 2017, 08:49 am
Download App from Playstore: