ನನ್ನಮ್ಮ

ಹೇಗೆ ವರ್ಣಿಸಲಿ ಅಮ್ಮಾ
ಜಗದೊಳೆಲ್ಲ ನಿನ್ನದೆ ಮಾಯೆ
ನೀ ಮುಕ್ಕೊಟಿ ದೇವರ ಛಾಯೆ

ನವ ಮಾಸ ಹೊತ್ತು ಕಂದನ
ಏಳು ಬೀಳಿನ ಜೀವನದಲ್ಲಿ
ಜಯವಾಗಲೆಂದು ಹರಸಿ ಭೂಮಿಗೆ ತಂದೆ

ಕಂದ ಅತ್ತಾಗ ಹೊತ್ತು
ಅಂಬರದ ಚಂದ್ರನ ತೋರಿ
ದೇವಲೋಕಕೂ ಮಿಗಿಲಾದ ಮಡಿಲಲಿ ಮಲಗಿಸಿದೆ

ದೇವ ದಾನವರಂದು
ಹಾಲ್ಗಡಲನು ಕಡೆದಾಗ ಅಮೃತ ದೊರೆಯಿತು
ನಾ ನಿನ್ನ ಉದರದಿಂದ ಹೊರ ಬಂದೊಡನೆ
ನಿನ್ನ ಎದೆಹಾಲೆಂಬ ಪಂಚಾಮೃತ ದೊರೆಯಿತು

ಅದೇನಿಹುದೆ ತಾಯಿ
ನಿನ್ನ ಕರೆವ ಪದದಲಿ
ಅಮ್ಮಾ ಎಂದೊಡನೆ ಮನ ಧನ್ಯಾ
ಜೀವದ ನರ ನಾಡಿಗಳಲೆಲ್ಲ
ನವ ಚೈತನ್ಯಾ

ಮೌನಿ
9739651101

- ಮೌನಿ

28 Apr 2017, 07:06 pm
Download App from Playstore: