ನಮ್ಮ ಬೆಂಗಳೂರು...
ನಮ್ಮ ಬೆಂಗಳೂರು
ಗಡಿ ಮೀರಿ ಬೆಳೆಯುತಿದೆ
ಎಲ್ಲರ ಕೈ ಬೀಸಿ ಕರೆಯುತಿದೆ
ತನ್ನವರು ಪರರೆಂಬ ಭೇದವಿಲ್ಲದೆ
ಕನಸು ಗೆದ್ದವರ ನೆಚ್ಚಿನ ಜಾಗವಿದು
ಸೋತು, ಗೆಲ್ಲುವ ಕನಸ ಕಂಡವರ ತಾಣವಿದು
ಸೋತು ಗೆದ್ದವರ, ಸೋತು ಸತ್ತವರ ಮೂಲವಿದು
ಹೈಟೆಕ್ ಇಲ್ಲುಂಟು,
ಐಟಿ ಬಿಟಿಯ ಜೊತೆಗೆ ಜಗದ ನಂಟು
ಕಂಡರೆ ಮುಗುಳ್ನಕ್ಕು ಮಾತಾಡುವವರು ಎಲ್ಲಂಟು
ಸಾಕೆನಿಸಿದವರಿಗೆ ಬೆಂದಕಾಳೂರು
ಇದ್ದವರಿಗೆ ಬೆಂಗಳೂರು
ಬಂದವರಿಗೆ ಬ್ಯಾಂಗಳೂರು
ತುಂಡುಬಟ್ಟೆ ಗೇಣು ಹೊಟ್ಟೆಯ ಅರಿಯದವರು
ಕಾಣದ ಹೊಟ್ಟೆ ಬಟ್ಟೆಯ ಬೆಲೆಯ ತಿಳಿದವರು
ಹಿಡಿ ಅನ್ನ ಮೊಳ ವಸ್ತ್ರಕ್ಕೆ ಕಾದವರರು ಬದುಕ ಕಟ್ಟುತ್ತಿರುವರು
ಪರರೇ ನಮ್ಮವರಾಗಿ, ನಮ್ಮವರೇ ಪರರಾಗಿ
ನಮ್ಮೊಳಗೆ ಪರರು ಸೇರಿ, ಪರರೊಳಗೆ ನಮ್ಮವರ ಹುಡುಕಿ
ಕನ್ನಡ ಎನ್ನಡವಾಗಿ, ಎನ್ನಡದೊಳಗೂ ನೂರಾರು ಭಾವ ಭಾಷೆ ಸೇರಿ
ಸೊರಗಿ ಸೋತರು, ಸತ್ತು ಗೆದ್ದು ಮೆರೆಯುತಿಹುದು ಇಂತಿಪ್ಪ ಬೆಂಗಳೂರು
- ಶ್ರೀಕಾವ್ಯ
28 Apr 2017, 08:54 pm
Download App from Playstore: