ಕೈ ತುತ್ತು
ಮತ್ತೊಮ್ಮೆ ಆಸೆಯಾಗಿತ್ತು
ತಿನ್ನಲು ಅಮ್ಮನ ಕೈ ತುತ್ತು
ನೋಡುತ್ತಲೆ ಇರುವೆ ಮೂಡಣದತ್ತ
ಚಂದಮಾಮ ಮೂಡಿ ಬರುತಾನಂತ
ಅಮ್ಮನ ಮಡಿಲೊಳಗೆ ಕುಳಿತು ಕೇಳಿದ ಕತೆಗಳ ಮೆಲಕುತ್ತ
ಆ ಬೆಳಕಲೆ ಅವಳೊಡನೆ ಕಲಿತ ಪಾಠವ ನೆನೆಯುತ್ತ
ಊಟವ ಅವನಿಗೆ ಕೊಡಲೆಂದು ಹುಸಿಯಲಿ ಕರೆಯುತ್ತ
ಅನ್ನವ ಬಾಯಿಗಿಡಲು ಹರಸಾಹಸ ಪಡುತಿದ್ದ ಅಮ್ಮನ ನೆನೆಯುತ್ತ
ಎಲ್ಲವ ಅರಿಯುವ ಮುನ್ನ ಉರುಳಿದ ಕಾಲವ ಶಪಿಸುತ್ತ
ಮತ್ತೊಮ್ಮೆ ಅಮ್ಮನ ಮಡಿಲ ಕೂಸಾಗಲು ಬಯಸುತ್ತ
ಕುಳಿತಿರುವೆ ಆ ಚಂದಿರನ ನೋಡುತ್ತಾ
ಎಲ್ಲವು ಮರುಕಳಿಸಲಿ ಇನ್ನೊಮ್ಮೆ ಎನ್ನುತ್ತ
- ಶ್ರೀಕಾವ್ಯ
28 Apr 2017, 11:19 pm
Download App from Playstore: