ಮನಸು ಸರೋವರ
ಮನಸ ಸರೋವರದಲ್ಲಿ
ತಾಗಿದೆ ಕಲ್ಲೊಂದು
ತಿಳಿನೀರ ಆಳದಲಿ
ಎದ್ದಿದೆ ಅಲೆಯೊಂದು
ಅಂದವು ಅದ ನೋಡುವ ಕಣ್ಣಿನಲಿ
ಆದರೆ ಆಳದಲಿ ಉದುಗಿದೆ ಕಾಣಲಾಗದ ನೋವಿನ ಸುಳಿಯೊಂದು
ಹುಟ್ಟಿದ ಪ್ರತಿ ಅಂದಗೊಳಿಸಿದ ತರಂಗದಲಿ
ಅಡಗಿದೆ ತಿಳಿಸಲಾಗದ ಭಾವವೊಂದು
ಅಂದವ ಕಂಡು ಸರೋವರದ ಅಲೆಯಲಿ
ತಿಳಿನೀರಲಿ ಬೀಳುವುದು ಕಲ್ಲು ಮತ್ತೊಂದು
ನೋಡುವರು ಚೆಂದವ ಮತ್ತೆ ಮತ್ತೆ ಆನಂದದಲಿ
ಸೇರುವುದು ಮತ್ತೊಂದು ನೋವು ಕಾಣದೆ ಸರೋವರದಲಿ
- ಶ್ರೀಕಾವ್ಯ
30 Apr 2017, 10:12 pm
Download App from Playstore: