ಅವಳು

ಬರೆಯುವ ಪ್ರತಿ ಸಾಲುಗಳು ಅವಳ ಹೆಸರೇಳುತ್ತವೆ
ಕನಸಾಗೆ ಕಾಡುವ ಅವಳು ಯುಗಗಳ ಕೂಡಿಸುವಳು
ನೆನಪುಗಳ ನಿತ್ಯ ಕಾಡುವುದು ಅವಳ ಕಿರುನಗೆಯನ್ನೆ
ಮೌನ ಸಾಕಾಗಿ ಮಾತುಗಳು ನೂರಾದವು
ಹಾಳೆಗಳು ಅವಳ ನೆನಪಿನ ಶಾಯಿಗೆ ಖಾಲಿಯಾದವು
ಮೊದಲ ಪದದಿಂದ ಕೊನೆಯ ಪದದ ವರೆಗೂ
ಅವಳ ನೆನಪು ಹಚ್ಚಾಗಿತ್ತು.
ನಗುವು ಕವಿತೆಯಾಯಿತು
ನೋಟ ಕಾವ್ಯವಾಹಿತು
ಮಾತು ಗ್ರಂಥವಾಯಿತು

ಕನ್ನಡಿಗ ರವಿಕುಮಾರ

- ರವಿಕುಮಾರ

30 Apr 2017, 10:19 pm
Download App from Playstore: