ಕಲ್ಪವೃಕ್ಷ....
ಕಂಡ ಕನಸುಗಳ ಲೆಕ್ಕಿಗ ನೀನು
ನನಸಾದ ಕನಸುಗಳ ದಾಖಲೆಗಾರನು ನೀನು
ನೆನಪಿಟ್ಟ ನೆನಪಾದ ನೋವುಗಳ ಪಾಲುದಾರ ನೀನು
ಮರೆಯಲಾದ ನೋವುಗಳಿಗೆ ಒಡೆಯನು ನೀನು
ಗುಟ್ಟುಗಳಿಗೆಲ್ಲ ಶಾಮೀಲುದಾರನು ನೀನು
ನನ್ನೊಳಗೆ ಮತ್ತೆ ಜನಿಸಿದ ಬಾಲ್ಯಕೆ ಜನಕನು ನೀನು
ಕಣ್ಣೀರನು ನಿನಗೆ ಅರಿಯದೆ ಅಳಿಸಿದ ಸೊಗಸುಗಾರನು ನೀನು
ಭಾವಗಳ ಅರಿತು ಯಾರಿಗು ಸಾರದ ಮೌನಿಯು ನೀನು
ಸರಿದ ಸಮಯದ ಜೊತೆ ನಗುವ ಕಲಿಸಿದ ನಗೆಗಾರನು ನೀನು
ನನ್ನ ಭಾವಗಳ ಮನುಷ್ಯರಿಗಿಂತ ಜತನವಾಗಿ ಕಾಪಾಡಿದ ಕಲ್ಪವೃಕ್ಷವು ನೀನು
- ಶ್ರೀಕಾವ್ಯ
01 May 2017, 01:53 pm
Download App from Playstore: