ಇನಿಯ....
ಇನಿಯನಿರಬೇಕು ಕಾಡದಂತೆ
ನಿರ್ಮಲ ನಗುವಿನ ಅಲೆಯ ಸೃಷ್ಟಿಸುವಂತೆ
ಅಮ್ಮನ ಮಡಿಲ ಎರವಲು ಪಡೆದಂತೆ
ನೋವುಗಳೆಲ್ಲವ ಅದರಲಿ ಮರೆಸುವಂತೆ
ಅಪ್ಪನ ಒಲವ ಸಾಕಾರ ಮೂರ್ತಿಯಂತೆ
ಹುಸಿ ಮುನಿಸ ತೋರಿಸಿದಾಗಲು ಸಂತೈಸಿ ಸಲಹುವಂತೆ
ಗುರುವಿನ ಮನಿಸಿರಬೇಕು ದೈವದಂತೆ
ತಪ್ಪುಮಾಡಿದಾಗ ಸೋತಾಗ ದಾರಿ ತೋರುವಂತೆ
ಗೆಳೆಯರ ತುಂಟತನವಿರಬೇಕು ಹಕ್ಕಿಗಳಂತೆ
ಕೆಣಕಿ ಕಿತ್ತಾಡಿ ನಗಿಸಿ ಕನಸುಗಳಿಗೆ ರೆಕ್ಕೆಯ ಕಟ್ಟಿ ಹಾರಿಸುವಂತೆ
ಎಂದು ಕದಡದ ಸಹನೆಯಿರಬೇಕು ತಪಸ್ವಿಯಂತೆ
ನೋವುಗಳನು ಒಪ್ಪಿ ನಗುನಗುತ ಸಾಗುವಂತೆ
ನಗುತ ನಗಿಸಿ ಸದಾ ಸುಳಿದಾಡಬೇಕು ರೇಗಿಸಿ ರಮಿಸಿ ಅಳಿಸಿ ಕಣ್ಣೀರ ಒರೆಸಿ ಅನುರಾಗದ ತಂಗಾಳಿಯಂತೆ
ಆತ್ಮಕೆ ಸಂಗಾತಿಯಂತೆ
- ಶ್ರೀಕಾವ್ಯ
01 May 2017, 04:39 pm
Download App from Playstore: