ಕನಸೆಲ್ಲ ಜಾರಿ.....
ಕನಸೆಲ್ಲ ಜಾರಿ , ಮಣ್ಣ ಸೇರಿ
ಕಣ್ಣ ಕಂಬನಿಯು ಕೆನ್ನೆಯ ಸವರಿ
ಸಾಗುತಿರುವವು ನನ್ನ ಮೀರಿ
ಕನಸಿನ ಆಸೆಯು ಮನಸಿಗೆ ಭಾರ
ಕಣ್ಣ ಹನಿಯು ಅದಕೆ ತುಂಬಾ ತೀರ
ಕನಸ ಅರಸಿ ಕಂಬನಿಯು ಜಾರಿ
ಹೊರಟಿಹುದು ಸಾಂಗತ್ಯವ ಸೇರಿ
ಸೋತ ಕನಸುಗಳೆ ಮನಸಿಗೆ ಮಾರಿ
ಕಾಡುತಿರುವವು ನೆನಪಾಗಿ ಬಾರಿ ಬಾರಿ
ಮನಸ ಮನೆಯಲಿ ಇವುಗಳದೆ ಚಾಕರಿ
ತಾಳಲಾಗುವುದೆ ಅವುಗಳ ವೈಖರಿ
ಬೇಡವಾಗಿದೆ ಸೋತ ಕನಸುಗಳ ಸವಾರಿ
ಹೇಳುತಿರುವೆನು ದೂರ ಸರಿಯಿರೆಂದು ಸಾರಿ ಸಾರಿ
ಮರೆಯಾಗದೆ ಕಾಡುತಿವೆ ನನ್ನಲೆ ಸೇರಿ
ಬದುಕಲಾಗುವುದೆ ಈ ನೋವನು ಮೀರಿ
- ಶ್ರೀಕಾವ್ಯ
02 May 2017, 11:30 am
Download App from Playstore: