ಹೊಸದೊಂದು ಅಧ್ಯಾಯ...

ಕನಸಗಳಲ್ಲೊಂದು ಕನಸು
ಅವಿತಿರುವ ಕನಸು ಕಲ್ಪನೆಗಳು ನೂರು
ಕಲ್ಲಾಗಿ ಇರಲಾರೆ ನಾ ಕೊನೆಯವರೆಗೆ
ಮನಸ್ಸಿನ ನೊರೆಂಟು ಪ್ರಶ್ನೆಗಳಿಗೆ
ಪ್ರತಿದಿನ ಕದನ ನಡೆವುದು ಮನದೊಳಗೆ
ಏಳು-ಬೀಳುಗಳ ಸಹಜ ಜೀವನ
ಬೇವು-ಬೆಲ್ಲ,ನೋವು-ನಲಿವಿನ ಹೂರಣ
ಹೆಜ್ಜೆ ಹೆಜ್ಜೆಗೂ ಸಿಗುವುದು ಕಾರಣ
ಹಳೆಯ ಪುಟಗಳ ನಡುವೆ
ಹೊಸದೊಂದು ಅಧ್ಯಾಯ
ಈಗ ನಾ ಬರೆಯಲಾರೆ
ಉತ್ತರ ಕೊಡಲಾಗದೆ ಒದ್ದಾಡುತಿದೆ
ಈ ಹೃದಯ...!!!

- Pb

03 May 2017, 10:39 am
Download App from Playstore: