ಹೇ ಹುಡುಗಿ...
ಹೇ ಹುಡುಗಿ
ನೀ ಬರಲು ಎದುರು ನೋಡದೆ ನನ್ನ
ಪೂರ್ವಪರವೆ ತಿಳಿಯದೆ ಚಿನ್ನ
ಮನಸಿದು ಆಲಿಂಗಿಸಿಹುದು ನಿನ್ನ
ಸೇರಿರಲು ನಯನಗಳು ಅರಿಯದೆ
ನೋಟದಲೆ ಕೋಲ್ಮಿಂಚು ಹರಿದಿದೆ
ಆಗಲೆ ಹೃದಯವು ನಿನ್ನ ಸೇರಿದೆ ನನಗೇನೆ ಹೇಳದೆ
ಕಣ್ಣಂಚಿನ ನಗುವೆ ಎಲ್ಲಾ ಹೇಳಿದೆ
ಆದರೂ ಮಾತು ಕೇಳಬೇಕೆನಿಸಿದೆ
ಆಡಿಬಿಡು ಮಾತು ನನ್ನ ಕೇಳದೆ
ನಿನ್ನ ಮಾತೆ ನನಗೆ ಸೆರೆಯಾಗಿದೆ
ಅದರೊಳಗಿನ ಬಂಧನವೂ ಸುಖವಾಗಿದೆ
ಸಲಹು ನನ್ನ ಎಂದು ಅದರಿಂದ ಬಿಡಿಸದೆ
ನಿನ್ನ ಮುದ್ದು ನಗುವಿನ ಅಲೆಯಲೆ
ನನ್ನ ಮನಸು ಕೊಚ್ಚಿ ಹೋಗಿದೆ
ಜೋಪಾನ ಮಾಡಿಕೊ ಅದನು ನಿನ್ನಲೆ
ಅದು ಕೈ ತಪ್ಪಿ ಜಾರಿ ಹೋಗುವ ಮೊದಲೆ
- ಶ್ರೀಕಾವ್ಯ
03 May 2017, 05:20 pm
Download App from Playstore: