ಅಲೆಗಳೋಟ
ಏನು ಶಕ್ತಿ ಅದೆಂಥಾ ಭಲಾಢ್ಯ,
ಮೂಡಣ ದಿಕ್ಕಿನಿಂದೊಂದಿಷ್ಟು,
ಪಡು,ತೆಂಕ,ಬಡಗಣದಿಂದೊಂದಷ್ಟುಷ್ಟು,
ಅಪ್ಪಳಿಸಿ ಬೊಬ್ಬಿರಿಸಿ ಬೋರ್ಘರೆಸಿ,
ತೀರಕ್ಕೆ ತಲುಪಿಸಿ ಉಪ್ಪು ನೀರನು,
ಕ್ಷಣಾರ್ಧದಲಿ ವಾಯುಗಾರನು...!!
ಕಡಲದೆಷ್ಟು ಸುಂದರ ನಗರಿ,
ಜಲಜೀವನವು ನಿತ್ಯಾಭಾರಿ,
ಹೊಳೆವ ರತ್ನ ಕಡಲ ಸಿಂಧೂರಿ,
ಸಂಧ್ಯಾರಾಗವಾಡಿ ಸೂರ್ಯನ ತಾ ನುಂಗಿ,
ಕರಾಳ ಕತ್ತಲಿಗೆ ಸದ್ದು ಗದ್ದಲಗಳೇ ರೂವಾರಿ,
ಒಮ್ಮೊಮ್ಮೆ ಮನುಕುಲಕೆ ಅದೆಷ್ಟು ಕ್ರೂರಿ...!!
ಅಲೆಗಳ ತೂಗಾಟಕೆ ತೂಗಿ ತಲೆದೂಗಿ,
ಮಿರ ಮಿರ ಮಿಂಚು ಮಧ್ಯಾಹ್ನದ ಹೊತ್ತಿಗೆ,
ಹುರುಪು ಅದೇ ಹೊರೆಯು ಅದೇ,
ಉತ್ಸಾಹಕೆ ಕೊನೆಯಿಲ್ಲ,
ಅಲೆಗಳ ಜೀವಕ್ಕೆ ಸಾವಿಲ್ಲ,
ಮನದ ಮುದಕೆ ತುಸುತಾಸು ತೀರದಲ್ಲಿ ಸಾಕಲ್ಲ...!!
ಆಗಾಗ ಮರಳಿಂದ ಇಣುಕಿ ಓಡಿ,
ಗುಳಿಗಳೊಳಗೆ ಸೇರೋ ಏಡಿಯ ಹೆಜ್ಜೆ
ಅಳಿಸಲು ಹರಿದು ಬಿಳಿನೊರೆಯ ನೀರು,
ಇನ್ನಾರದೋ ಹೆಜ್ಜೆಗೆ ಮರಳಿ ಸೇರಿಸಿ ಮರಳು,
ಮಾತಿಲ್ಲ ಕಥೆಯಿಲ್ಲ ಕೆಲಸಕ್ಕೆ ರಜೆಇಲ್ಲ,
ಅಪ್ಪಳಿಸಿ ಕುಪ್ಪಳಿಸಿ ಬರುವ ಅಲೆಗಿಲ್ಲಿ ಅಳಿವಿಲ್ಲ..!!
-ಕನ್ನಡದ ಭಕ್ತ
- ಕನ್ನಡದ ಭಕ್ತ
03 May 2017, 11:37 pm
Download App from Playstore: