ಮಳೆಯೇ.....
ಬಣ್ಣಿಸಲಾಗದ ಚೆಲುವನಿವ
ಈ ಅವನಿಗೇನೆ ಇನಿಯನಿವ...
ಅವಳ ಸೇರುತ ಮೋಡಿಯ ಮಾಡಿರುವ...
ಸುಡುತಿರುವಳು ಧರಣಿ ಸಹಿಸಲಾಗದೆ ಬಿಸಿಲ ಬೇಗೆಯ ವಿರಹವ...
ಕಾಣೆಯಾಗುತಿವೆ ಜೀವಗಳು ತಾಳಲಾರದೆ ಅವಳ ತಾಪವ...
ನೋವಲೆ ನಲಗುತಿರುವಳು ತಾಯಿ ನೋಡಿ ಅಳಿಯುತ್ತಿರುವ ಸಂಕುಲವ..
ನೀನೆ ಅವಳ ಒಡಲ ಕಾಯುವವ..
ಅಪ್ಪಿಕೊ ಒಮ್ಮೆ ಮರೆತು ಬಿಂಕವ..
ಇಳಿದು ಸೇರು ಅವಳ , ತೊರೆದು ಗಗನವ..
ಆಸೆಯಲಿ ಕಾಯುತಿದೆ ಜೀವ ಸಂಕುಲ ನೋಡಲು ನಿಮ್ಮಿಬ್ಬರ ಸಂಗಮವ..
ಬಂದು ಹಸಿರ ಸೀರೆ ಉಡಿಸಿ ನೋಡು ಬುವಿಯ ಚೆಂದವ..
ನೀನಾಗುವೆ ಎಲ್ಲವ ಮರೆತು ಅವಳ ಅಂದಕೆ ತಲೆದೂಗುವವ....
ಮರೆಯದೆ ಬಂದು ತಣಿಸು ತಾಪವ,ಉಳಿಸು ಮೂಕ ಜೀವಸಂಕುಲವ...
- ಶ್ರೀಕಾವ್ಯ
04 May 2017, 02:02 pm
Download App from Playstore: