ಸೆರೆಯಾಗಿರುವೆ ನಾನು
ಕವನದೊಳಗಡಗಿ ಕುಳಿತಿರುವೆ ನೀನು
ಬಿಡಿಸಲು ಹೋಗಿ ಅಲ್ಲೇ ಸೆರೆಯಾಗಿರುವೆ ನಾನು
ಪ್ರತಿ ಪದದಲ್ಲೂ ನಿನ್ನ ನೆನಪೇ ತುಂಬಿರಲು
ಕಾಡಿಸುತಿದೆ ಪ್ರತಿ ಘಳಿಗೆ ನಿನದೇ ನೆನಪು
ಚಡಪಡಿಸುತಿದೆ ಕ್ಷಣ ಕ್ಷಣವೂ
ಈ ನನ್ನ ಹೃದಯ
ಪ್ರತಿ ಉಸಿರಲ್ಲೂ ನಿನ್ನೆಸರ ಜಪಿಸುವೆ
ನನ್ನಿಂದ ನೀನೆಷ್ಟೇ ದೂರ ಹೋದರು
ಮರೆಯಲಾರೆ ನೀ ನನ್ನ ಮರೆತರೂ
ಕನಸಲೂ ನಾ ಕಾಣಬಯಸುವೆ ನಿನ್ನನೇ
ನಿನ್ನ ಸನಿಹದ ಹೊರತು ಬೇರೇನೂ ಬೇಡೆನು
ನೀ ಜೊತೆಗಿದ್ದರೆ ನಾ ಮರೆಯುವೆ ಈ ಜಗವನೆ
ನಿನಗಾಗಿ ಮುಡಿಪಿಟ್ಟಿರುವೆ ನನ್ನ ತನು-ಮನವನು
ಹೇಗೆ ಹೇಳಲಿ ತಿಳಿಯದಾಗಿದೆ ಪ್ರೀತಿಯನು...
- Pb
06 May 2017, 08:52 am
Download App from Playstore: