ಕವಿತೆ.....

ನಿಂತಾಗಲೊಮ್ಮೆ ಮನವ ಸೇರಿದ ಸೊಲ್ಲ ನೆನೆದು
ಕುಳಿತಾಗಲೊಮ್ಮೆ ಕಲಿತ ನುಡಿಯ ಸೇರಿಸಿ
ಮನಸೊಳಗೆ ಕಾಣದೆ ಬಚ್ಚಿಟ್ಟು ಕುಳಿತ ಪದವ ಹುಡುಕಿ
ಮರೆಯಾಗದೆ ಕಣ್ಮುಂದೆ ಸುಳಿದಾಡುವ ಶಬ್ಧವ ಹೆಕ್ಕಿ
ಮನಸ ಕಾಡುತಿರುವ ಮರೆಯಲಾಗದ ನೆನಪ ಪದಗಳಲೆ ಜರಿದು
ಬದುಕ‌ ಹಸನಾಗಿಸಿದ ಸವಿಯ ನನಸ ಮತ್ತೊಮ್ಮೆ ನೆನೆದು
ಜೊತೆಯಾಗಿಯೇ ಇದ್ದು ನನಸಾಗದ ಕನಸ ಮೇಲೆ ಮುನಿದು
ಬದುಕ ಜೊತೆ ಜೊತೆಗೆ ‌ಬಂದವರ ಹರಸಿ ಹಾರೈಸಿ
ಅರ್ಧಹಾದಿಯಲೆ ಸರಿದು ನಿಂತವರ ಮೇಲೆ ವರದಿ ಒಪ್ಪಿಸಿ
ಪಾಠ ಕಲಿಸಿದ ಕ್ಷಣ ಮನಕೆ ಮತ್ತೊಮ್ಮೆ ವಂದಿಸಿ
ಕಾಪಾಡಿದ ಜೀವಗಳಿಗೆ ಧನ್ಯವಾದ ಅರ್ಪಿಸಿ
ಹೇಳಬೇಕಾದ ಮಾತು ರೀತಿ ನೀತಿ ಶಾಂತಿ‌‌ ಕ್ರಾಂತಿಗಳ ಪದಗಳಲೇ ಬೆರೆಸಿ
ಜೀವ ಜೀವಗಳ ವಿವಿಧ ಭಾವ ಭಾವನೆಗಳ ಸಾಲುಗಳಲಿ ಮೇಳೈಸಿ

ಮೂಡುತಿರುವ ಕವಿತೆಗಳು

ಮಾಡುತಿಹುದು ಮನವ ಸೊಗಸು,
ಅಡಗಿ ಕುಳಿತಿದ್ದ ಕವಿ ಮನವ ಜಗಕೆ ಪರಿಚಯಿಸಿ

- ಶ್ರೀಕಾವ್ಯ

06 May 2017, 10:40 pm
Download App from Playstore: