ಒಡೆದ ಕನವರಿಕೆ

ಮೂರನೇ ಬಾರಿ ಅದೇ ದಾರಿಗೆ
ಹೆಜ್ಜೆಯಾದೆ ಹುಡುಗೀ
ಖಾಲಿ ಕಲ್ಲಿನ ಬೆಂಚು ಒಂದಿಷ್ಟು
ಹಳೆಯ ನೆನಪು ಮಾತ್ರ ಜೋಳಿಗೆ ತುಂಬಿಸಿ ಹಿಂದಿರುಗುತ್ತಿರುವೆ

ಬಿಸಿಲ ನೆಪಕ್ಕೆ ಮರದ ವಾರೆ ನಿಂತ
ಬೇಸಿಗೆಕಾಲ ಪದೇ ಪದೇ
ಕೊರೆಯುತ್ತದೆ ನಿನ್ನಂತೆ
ಮೌನ ಒಡೆಯಬೇಕೆಂಬ ನನ್ನ
ಉಮೇದು ಕಾಡಿಗೆ ಕಣ್ಣಿಗೆ
ಪದೇ ಪದೇ ಸೋಲುತ್ತಿತ್ತು

ಮುಗಿಲೂರಿನ ಚೆಲುವೆ
ನನ್ನ ತೊದಲುವಿಕೆಗೆ ಅರ್ಥ ಕೊಡುತ್ತಾಳೆ
ಹೊಸತೊಂದು ಅಧ್ಯಾಯ ಬರೆಯಬೇಕೆಂಬ ನನ್ನ ಹುಂಬತನ ಮರಿ ಹಾಕಿದ್ದು ಆವಾಗಲೇ

ನಿನ್ನ ಅತೀ ಸಮೀಪದಲ್ಲಿ
ತೊರೆದು ಬಂದ ಗರಿಷ್ಟ ಮಟ್ಟದ
ಆಶೆಯೊಂದಕ್ಕೆ ತಿಲಾಂಜಲಿ ಇಡದಿರು
ಒಲವಿನ ಪಾಠಶಾಲೆಗೆ
ನೂತನ ವಿದ್ಯಾರ್ಥಿ ನಾ

-ಅವಿಜ್ಞಾನಿ

- ಅವಿಜ್ಞಾನಿ

07 May 2017, 04:55 pm
Download App from Playstore: